ಸೋಮವಾರ, ಜೂನ್ 21, 2021
21 °C

ಬೆಸ್ಕಾಂಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬೆಸ್ಕಾಂ ತಂಡ ನಗರದ ಜಿಲ್ಲಾ ಕ್ರೀಡಾಂಗಣ ಹಾಗೂ ಹೆಸ್ಕಾಂ ನೌಕರರ ಸಭಾಭವನದಲ್ಲಿ ನಡೆದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಂತರ್ ಕಂಪೆನಿಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. ಮೆಸ್ಕಾಂ ರನ್ನರ್‌ಅಪ್ ಆಯಿತು.ಬೆಸ್ಕಾಂ ತಂಡದವರು ಕಬಡ್ಡಿ, ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕೊಕ್ಕೊದಲ್ಲಿ ದ್ವಿತೀಯ ಸ್ಥಾನ ಪಡೆದು 26 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಆದರು. ರನ್ನರ್ ಅಪ್ ಆದ ಮೆಸ್ಕಾಂ ದೇಹದಾರ್ಢ್ಯದಲ್ಲಿ ಪ್ರಥಮ, ಕೊಕ್ಕೊ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿತು. ಈ ತಂಡ 24 ಅಂಕ ಪಡೆಯಿತು.ಬುಧವಾರ ನಡೆದ ಕೊಕ್ಕೊ ಸ್ಫರ್ಧೆಯ ಫೈನಲ್ ಪಂದ್ಯದಲ್ಲಿ ಹೆಸ್ಕಾಂ 20-14ಪಾಯಿಂಟ್‌ಗಳಿಂದ ಬೆಸ್ಕಾಂ ಎದುರು ಜಯಿಸಿತು.ಕಬಡ್ಡಿ ಅಂತಿಮ ಘಟ್ಟದ ಪಂದ್ಯದಲ್ಲಿ ಚೆಸ್ಕಾಂ ಎದುರು ಜಯಿಸಿ ಚಾಂಪಿಯನ್ ಪಟ್ಟ ಪಡೆಯಿತು. ಚೆಸ್ಕಾಂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.ದೇಹದಾರ್ಢ್ಯ ಸ್ಪರ್ಧೆಯ ಫಲಿತಾಂಶ: ಶಾರ್ಟ್ ಕ್ಲಾಸ್ ವಿಭಾಗ: ಮೆಸ್ಕಾಂನ ರೋಶನ್ ಫೆರೆರೋ (ಪ್ರಥಮ),  ಚೆಸ್ಕಾಂನ ರಘು (ದ್ವಿತೀಯ), ಮೆಸ್ಕಾಂ ಶ್ರೀನಾಥ (ತೃತೀಯ), ಮಿಡಲ್ ಕ್ಲಾಸ್: ಬೆಸ್ಕಾಂನ ಜಿ.ರವಿಚಂದ್ರ (ಪ್ರಥಮ), ಮೆಸ್ಕಾಂನ     ಎಲ್.ಡಿ. ಜಗದೀಶ (ದ್ವಿತೀಯ), ಮೆಸ್ಕಾಂನ ಅಶೋಕ ಶೆಟ್ಟರ (ತೃತೀಯ). ಟಾಲ್   ಕ್ಲಾಸ್: ಬೆಸ್ಕಾಂನ ಅನಂತಕುಮಾರ (ಪ್ರಥಮ), ಹೆಸ್ಕಾಂನ ಎ. ಜಿ. ಕಿತ್ತೂರ, ದ್ವಿತೀಯ, ಮೆಸ್ಕಾಂನ ದೇವಧರ ಪಾಟೀಲ(ತೃತೀಯ) ಸ್ಥಾನ ಪಡೆದರು.ಸುಪರ್ ಟಾಲ್: ಬೆಸ್ಕಾಂ ರಂಗಾರೆಡ್ಡಿ (ಪ್ರಥಮ), ಬೆಸ್ಕಾಂನ ಆರ್. ನಾಗರಾಜ (ದ್ವಿತೀಯ), ಮೆಸ್ಕಾಂನ ಕೆ. ನಾಗರಾಜ (ತೃತೀಯ) ಸ್ಥಾನ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.