ಬೆಸ್ಕಾಂ ಎಂಜಿನಿಯರ್‌ಗೆ ಅರಣ್ಯ ಇಲಾಖೆ ಹುಡುಕಾಟ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬೆಸ್ಕಾಂ ಎಂಜಿನಿಯರ್‌ಗೆ ಅರಣ್ಯ ಇಲಾಖೆ ಹುಡುಕಾಟ

Published:
Updated:

ತುಮಕೂರು: ಇಲ್ಲಿಗೆ ಸಮೀಪದ ಕುಣಿಗಲ್ ರಸ್ತೆಯ ಬಾಣಾವರದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರಸ್ತೆಯಲ್ಲಿದ್ದ ಎರಡು ಮರಗಳನ್ನು ಬುಡ ಸಮೇತ ಉರುಳಿಸಿ, 30 ಮರಗಳ ದೊಡ್ಡದೊಡ್ಡ ಕೊಂಬೆ ಕಡಿದಿರುವ ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ ಎಂಜಿನಿಯರ್ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ.ಅರಣ್ಯ ಇಲಾಖೆ ಅನುಮತಿ ಪಡೆಯದೆ ಏಕಾಏಕಿ ರಸ್ತೆಯಲ್ಲಿದ್ದ ಎರಡು ಮರ ಕಡಿಯಲಾಗಿದೆ. ಅಲ್ಲದೆ 30 ಮರಗಳ ಕೊಂಬೆ ಕಡಿಯಲಾಗಿದೆ. ಸಾರ್ವಜನಿಕರಿಂದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಯಿತು. ಕಡಿದಿರುವ ಮರ ಹಾಗೂ ಕೊಂಬೆಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಗಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.ನಿರಂತರ ಜ್ಯೋತಿ ಅಳವಡಿಸಲು ಮರ ಕಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೂವರೆಗೂ ವಿಚಾರಣೆಗೆ ಬೆಸ್ಕಾಂ ಅಧಿಕಾರಿಗಳು ಸಿಕ್ಕಿಲ್ಲ. ಬೆಸ್ಕಾಂ ಎಂಜಿನಿಯರ್ ವಿರುದ್ಧ ಅರಣ್ಯ ಕಾಯ್ದೆ ಸೆಕ್ಷನ್ 33ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎಂಜಿನಿಯರ್ ಹೆಸರು ಏನೆಂದು ಕೂಡ ಬೆಸ್ಕಾಂ ಅಧಿಕಾರಿಗಳು ತಿಳಿಸುತ್ತಿಲ್ಲ. ಆ ಎಂಜಿನಿಯರ್ ವಿಚಾರಣೆಗೆ ಲಭ್ಯವಾಗಿಲ್ಲ. ಸೋಮವಾರದಿಂದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ ಹೇಳಿದರು.ಆಡಳಿತ ಪಕ್ಷದ ಪ್ರಮುಖ ರಾಜಕಾರಣಿಯೊಬ್ಬರ ಜಮೀನಿನಲ್ಲಿ ಉದ್ಯಮ ಆರಂಭಿಸುವ ಸಲುವಾಗಿ ವಿದ್ಯುತ್ ಸಂಪರ್ಕ ನೀಡಲು ಮರಗಳನ್ನು ಮನಸ್ಸಿಗೆ ಬಂದಂತೆ ಕಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry