ಬೆಸ್ಕಾಂ ಕೌಂಟರ್ ಸ್ಥಳಾಂತರ

ಶುಕ್ರವಾರ, ಜೂಲೈ 19, 2019
23 °C

ಬೆಸ್ಕಾಂ ಕೌಂಟರ್ ಸ್ಥಳಾಂತರ

Published:
Updated:

ನಗರದ ವಾರ್ಡ್ ನಂ. 24, ನಾಗವಾರದಲ್ಲಿದ್ದ ಜನರ ಅನುಕೂಲಕ್ಕಾಗಿ ಬೆಸ್ಕಾಂನ ಒಎಕ್ಸ್‌ಎಂನಲ್ಲಿ ನಗದು ಪಾವತಿ ಕೌಂಟರ್ ತೆರೆಯಲಾಗಿತ್ತು. ಆದರೆ ಇತ್ತೀಚೆಗೆ ಹೇಳದೆ ಕೇಳದೆ ಇಲ್ಲಿಂದ ಬೇರೆಡೆಗೆ ಸ್ಥಳಾಂತರವಾಗಿದೆ.

ಕೇಳಿದರೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಇದರಿಂದಾಗಿ ಈ ಭಾಗದ ಜನ ಹಣ ಪಾವತಿಸಲು ಹೊರವರ್ತುಲ ರಸ್ತೆ ದಾಟಿ ದೂರದ ಮತ್ತೊಂದು ಬೆಸ್ಕಾಂ ಕಚೇರಿಗೆ ಹೋಗಬೇಕಿದ್ದು, ಪ್ರತಿ ಸಾರಿ ಈ ರಸ್ತೆ ದಾಟುವ ಸಾಹಸ ಮಾಡುತ್ತ ಪ್ರಾಣ ಭೀತಿ ಎದುರಿಸುವಂತಾಗಿದೆ.ಸಂಬಂಧಪಟ್ಟವರು ತುರ್ತಾಗಿ ಗಮನಹರಿಸಿ ಮೊದಲಿನಂತೆ ಸೇಂಟ್ ಫಿಲೋಮಿನಾ ಆಸ್ಪತ್ರೆ ರಸ್ತೆಯ ಒಎಕ್ಸ್‌ಎಂನಲ್ಲೇ ವ್ಯವಸ್ಥೆ ಮಾಡಬೇಕು  ಎಂದು ಕೋರುತ್ತೇನೆ.

- ನಾ.ವೆ. ಮುರಳಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry