ಭಾನುವಾರ, ಮೇ 16, 2021
28 °C

ಬೆಸ್ಕಾಂ ಸಿಬ್ಬಂದಿಯ ಸ್ವಚ್ಛತಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಕೆಇಬಿ ಕಾಲೊನಿ ಆವರಣದ ಸುತ್ತಮುತ್ತಲೂ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಸ್ಕಾಂ ಸಿಬ್ಬಂದಿ ಶನಿವಾರ ಸ್ವಯಂಪ್ರೇರಣೆ ಯಿಂದ ಕೈಗೊಂಡರು. ಗಿಡಗಂಟಿಗಳು ಮತ್ತು ಮಾಲಿನ್ಯದಿಂದ ಸೊಳ್ಳೆಕಾಟ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಸ್ವಚ್ಛತಾ ಅಭಿಯಾನ ಕೈಗೊಂಡರು.`ಗಿಡಗಂಟಿಗಳು ಎಲ್ಲೆಡೆ ಬೆಳೆದಿದ್ದರಿಂದ ಮಾಲಿನ್ಯ ಜಾಸ್ತಿಯಾಗಿತ್ತು. ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ನಮ್ಮ ಕಾಲೋನಿಯಲ್ಲಿ ನಾವೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಎಲ್ಲರೂ ಜೊತೆಗೂಡಿ ಇಂದು ಕೆಲಸ ಮಾಡಿದೆವು. ಹಿರಿಯರು-ಕಿರಿಯರೆನ್ನದೇ ಎಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡೆವು. ಸ್ವಚ್ಛತಾ ಅಭಿಯಾನವನ್ನು ನಿರಂತರವಾಗಿ ಕೈಗೊಳ್ಳಲಿದ್ದೇವೆ~ ಎಂದು ಬೆಸ್ಕಾಂ ಸಿಬ್ಬಂದಿ ತಿಳಿಸಿದರು. ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿ ಯರ್ ಎ.ರಮೇಶ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ಸುಧಾಕರ ರೆಡ್ಡಿ, ರಮೇಶ್, ಕೆಪಿಟಿಸಿಎಲ್ ಸಂಸ್ಥೆಯ ಅಧಿಕಾರಿ ಅಶ್ವತ್ಥನಾರಾಯಣ, ಬೆಸ್ಕಾಂ ಸಿಬ್ಬಂದಿ ಗಳಾದ ವೆಂಕಾನಾಯಕ, ಜಾನ್ ಕೆನಡಿ, ಆಂಥೋನಿ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.ಸೆ.16, 17ಕ್ಕೆ ಪೈಕಾ ಕ್ರೀಡಾಕೂಟ

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು  ಜಿಲ್ಲಾಮಟ್ಟದ ಪೈಕಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 16 ಮತ್ತು 17 ರಂದು ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.