ಬುಧವಾರ, ಮೇ 18, 2022
25 °C

ಬೇಂದ್ರೆ ನೆನಪಿನ ಪಂಚಾಮೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲೇಶ್ವರದ ಪಂಚಾಮೃತ ಸುಗಮ ಸಂಗೀತ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ವರಕವಿ ಬೇಂದ್ರೆಯವರ ಗೀತೆಗಳ ಗಾಯನ ಮತ್ತು ನೃತ್ಯ ಏರ್ಪಡಿಸಿತ್ತು.‘ಬೇಂದ್ರೆ ನೆನಪು’ ಎಂಬ ಈ ಕಾರ್ಯಕ್ರಮದಲ್ಲಿ ಪಂಚಾಮೃತದ ವಿದ್ಯಾರ್ಥಿಗಳು ‘ಚುಮು ಚುಮು ನುಸುಕಿನಲಿ,  ತುಂಬಿ ಬಂದಿತ್ತಾ ತಂಗಿ, ಬಾರೋ ಸಾಧನ ಕೇರಿಗೆ’ ಮುಂತಾದ ಗೀತೆಗಳನ್ನು ಹಾಡಿ ರಂಜಿಸಿದರು. ಅಭ್ಯಾಸ ಕುಂಜದ ವಿದ್ಯಾರ್ಥಿಗಳು ಮೈಸೂರು ಅನಂತ ಸ್ವಾಮಿ ಸಂಗೀತ ಸಂಯೋಜನೆಯ ‘ಒಂದೇ ಒಂದೇ ಕರ್ನಾಟಕ ಒಂದೆ, ಗುರುವೆ’ ಇತ್ಯಾದಿ ಗೀತೆಗಳನ್ನು ಹಾಡಿ ರಂಜಿಸಿದರು.ಯುವ ಗಾಯಕ ಉದಯ್ ಅಂಕೋಲ, ಉದಯೋನ್ಮುಖ ಗಾಯಕಿ ರಶ್ಮಿ ಎ.ಎನ್. ರಾವ್, ಪಂಚಾಮೃತ ಶಾಲೆ ಸಂಸ್ಥಾಪಕಿ ಗಾಯತ್ರಿ ಕೇಶವಮೂರ್ತಿ ಗೀತನಮನ ಸಲ್ಲಿಸಿದರು. ಆರತಿ ಸುರೇಶ್ ನೇತೃತ್ವದಲ್ಲಿ ‘ಶ್ರಾವಣ ಬಂತು ನಾಡಿಗೆ’ ನೃತ್ಯ ಪ್ರದರ್ಶಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ಸಂಯೋಜಕ ಬಿ.ವಿ. ಶ್ರೀನಿವಾಸ್, ರಿಯಾಲಿಟಿ ಶೋಗಳಿಗಾಗಿ ನಾಲ್ಕು ಹಾಡುಗಳನ್ನು ಕಲಿಯುವುದರಲ್ಲಿ ಆಸಕ್ತಿ ತೋರದೆ, ಶುೃತಿ, ತಾಳ, ಸಾಹಿತ್ಯದ ತಿಳಿವಳಿಕೆಯೊಂದಿಗೆ ಭಾವಗೀತೆಗಳನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಹಿರಿಯ ಗಾಯಕ ಹಾಗೂ ಸಂಗೀತ ಸಂಯೋಜಕ ಪಾರ್ವತಿಸುತ ಮತ್ತು ಉಪಲಯ ವಾದ್ಯಗಾರ ಎನ್.ಶ್ರೀನಿವಾಸ್ ಪ್ರಸಾದ್ ಅವರಿಗೆ ಅಭಿನಂದನೆ ಮತ್ತು ಉದಯ್ ಅಂಕೋಲ ಅವರಿಗೆ ವಾರ್ಷಿಕ ಯುವ ಗಾಯಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಹಿರಿಯ ಗಾಯಕ ಎಸ್.ಸೋಮಸುಂದರಂ, ಎಂ.ಎಸ್.ಕಾಮತ್, ಗಾಯಕ ಲಕ್ಷ್ಮಣ್ ಶ್ರೀರಾಮ್, ತಬಲಾ ವಾದಕ ಲೋಕೇಶ್, ರವಿ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.