ಬೇಗೂರು: ಮದ್ಯ ಮಳಿಗೆ ಆರಂಭಕ್ಕೆ ಆಗ್ರಹ

7

ಬೇಗೂರು: ಮದ್ಯ ಮಳಿಗೆ ಆರಂಭಕ್ಕೆ ಆಗ್ರಹ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರಿನಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಹಾಗೂ ಉದ್ಯಮಿಗಳು ಮಂಗಳವಾರ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಯಿತು.ಜಿ.ಪಂ. ಅಧ್ಯಕ್ಷ ಬಿ.ಎಂ. ಮುನಿರಾಜು ಮಾತನಾಡಿ, ಸರ್ಕಾರ ಎಂಎಸ್‌ಐಎಲ್ ಮೂಲಕ ಮದ್ಯ ವಿತರಣೆಗೆ ತಾಲ್ಲೂಕು ಕೇಂದ್ರದಲ್ಲಿ ಮಳಿಗೆ ಪ್ರಾರಂಭಿಸಿದೆ, ಆದರೆ ಬೇಗೂರಿನಲ್ಲಿ ಖಾಸಗಿ ವ್ಯಕ್ತಿಗಳ ಲಾಬಿಯಿಂದ ಅಧಿಕಾರಿಗಳು ಇನ್ನೂ ಮಳಿಗೆ ಶುರು ಮಾಡಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ. ಖಾಸಗಿಯವರು ನಕಲಿ ಮದ್ಯ ನೀಡುವ ಮೂಲಕ ಜನರಿಗೆ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.ಉದ್ಯಮಿ ಬಿ.ಪಿ. ಮುದ್ದಮಲ್ಲು ಮಾತನಾಡಿ, ರಾಜ್ಯದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡು ತ್ತಿರುವ ಅಬಕಾರಿ ಅಧಿಕಾರಿಗಳನ್ನು ವರ್ಗ ಮಾಡಬೇಕು. ಇವರು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಖಾಸಗಿ ಒಡ್ಡುವ ಹಣದ ಆಮಿಷ ಎಂದು ದೂರಿದರು.ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ಘೋಷಣೆ ಕೂಗಿದರು.ಭರವಸೆ: ಪ್ರತಿಭಟನಾ ಸ್ಥಳಕ್ಕೆ ಅಬಕಾರಿ ಜಿಲ್ಲಾಧಿಕಾರಿ ಜಿ. ಮಾದಯ್ಯ ಭೇಟಿ ನೀಡಿದಾಗ ಪ್ರತಿಭಟ ನಾಕಾರರು ಅವರನ್ನು ತರಾಟೆಗೆ ತೆಗೆದುಕೊಂಡರು. ‘ಅಬಕಾರಿ ಸಚಿವರು ಇನ್ನೂ ಆದೇಶ ನೀಡಿಲ್ಲ. ಈ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಅವರಿಗೆ ಜಿ.ಪಂ. ಅಧ್ಯಕ್ಷ ಬಿ.ಎಂ. ಮುನಿರಾಜು ಮನವಿ ಪತ್ರ ಸಲ್ಲಿಸಿದರು.ಬೇಗೂರು ಜಿ.ಪಂ. ಸದಸ್ಯ ಡಿ.ಜಿ. ನಾಗೇಂದ್ರ, ತಾ.ಪಂ. ಅಧ್ಯಕ್ಷ ಆರ್. ಜಯರಾಂ, ತಾ.ಪಂ. ಸದಸ್ಯ ಬಂಗಾರ ನಾಯಕ್, ಎಚ್.ಎಸ್. ನಂಜುಂಡ ಪ್ರಸಾದ್, ನಿಟ್ರೆ ನಾಗರಾಜು, ಹಿರೇಮಠ, ಪಂಚಾಕ್ಷರಿ, ಯಶವಂತ್, ನೀಲಕಂಠಪ್ಪ, ನಾಗಶೆಟ್ಟಿ, ರವಿ, ನಂದೀಶ್, ಶ್ರೀಕಂಠಪುರ ನಾಗರಾಜು, ರಾಜಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎಲ್. ಸುರೇಶ್, ಮಾಜಿ ಉಪಾಧ್ಯಕ್ಷ ಎಸ್. ರಾಜಶೇಖರ್, ಪುರಸಭಾಧ್ಯಕ್ಷೆ ರಾಧಮ್ಮ, ಕೂಸಯ್ಯ, ನಾಗರಾಜು, ಯುವ ಕಾಂಗ್ರೆಸ್ ಮುಖಂಡ ಕಮರಹಳ್ಳಿ ಎಂ.ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry