ಭಾನುವಾರ, ಮೇ 9, 2021
26 °C

ಬೇಡಿಕೆಗಳ ಪರಿಶೀಲನೆ ಭರವಸೆ:ಪೆಟ್ರೋಲ್ ಬಂಕ್ ಮುಷ್ಕರ ಸದ್ಯಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಪೆಟ್ರೋಲ್ ಪಂಪ್ ಡೀಲರ್‌ಗಳು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಲು ಪೆಟ್ರೋಲಿಯಂ ಸಚಿವ ಎಸ್. ಜೈಪಾಲ್ ರೆಡ್ಡಿ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶದಾದ್ಯಂತ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು  ಡೀಲರ್‌ಗಳ ಒಕ್ಕೂಟ ಸದ್ಯಕ್ಕೆ ಕೈ ಬಿಟ್ಟಿದೆ.ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಹೆಚ್ಚು ಕಮಿಷನ್ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಒಕ್ಕೂಟ (ಎಫ್‌ಎಐಪಿಟಿ) ಸೋಮವಾರ ದೇಶದಾದ್ಯಂತ ಒಂದು ದಿನದ ಮುಷ್ಕರ ಮತ್ತು ಈ ತಿಂಗಳ ಅಂತ್ಯದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರೆ ನೀಡಿತ್ತು.ಏಪ್ರಿಲ್ 19 ಮತ್ತು 20ರಂದು ನಡೆದಿದ್ದ ಎರಡು ಸುತ್ತಿನ ಮಾತುಕತೆ ವೇಳೆ ಡೀಲರ್‌ಗಳ ಬೇಡಿಕೆಗಳನ್ನು ಪರಿಗಣಿಸಲು ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ  ಒಪ್ಪಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.`ಈ ಮಾತುಕತೆ ಸಂದರ್ಭದಲ್ಲಿ ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ಸಂಬಂಧಿಸಿದ ವಿವಿಧ ವಿಚಾರ ಮತ್ತು ಬೇಡಿಕೆಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು~ ಎಂದು ತಿಳಿಸಿದ್ದಾರೆ.ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ನೀಡುವ ಕಮಿಷನ್ ಕುರಿತಂತೆ ಅಪೂರ್ವ ಚಂದ್ರ ಕಮಿಟಿ ಮಾಡಿರುವ ಶಿಫಾರಸನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ರೆಡ್ಡಿ ಹೇಳಿರುವುದಾಗಿ  ಬನ್ಸಲ್ ಹೇಳಿದ್ದಾರೆ.`ವಾಹನಗಳ ಚಕ್ರಗಳಿಗೆ ಗಾಳಿ, ಗ್ರಾಹಕರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಪೆಟ್ರೋಲ್ ಪಂಪ್‌ಗಳಲ್ಲಿ ಒದಗಿಸಲಾಗುವ ಸೇವೆಗಳಿಗೆ ದರ ವಿಧಿಸುವ ಬಗ್ಗೆ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸುವ ಭರವಸೆಯನ್ನೂ ಸಚಿವರು ನೀಡಿದ್ದಾರೆ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.