ಬೇಡಿಕೆ ಈಡೇರಿಕೆಗೆ ಆಗ್ರಹ

7

ಬೇಡಿಕೆ ಈಡೇರಿಕೆಗೆ ಆಗ್ರಹ

Published:
Updated:

ಭಟ್ಕಳ: ವಿವಿಧ ಬೇಡಿಕೆ ಈಡೇರಿಸುವಂತೆ ಅಗ್ರಹಿಸಿ ಸಿ.ಐ.ಟಿ. ಯು ನೇತೃತ್ವದಲ್ಲಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಇತ್ತೀಚೆಗೆ ಪ್ರತಿಭಟನೆ ನಡೆಸಿ ಸಹಾಯಕ ಕಮೀಷನರ್ ಅಶೋಕ ನಾಯ್ಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಅಕ್ಷರ ದಾಸೋಹ ನೌಕರರ ಸೇವೆಯನ್ನು ಮುಂದುವರಿಸಬೇಕು, ಯೋಜನೆಯನ್ನು ಸ್ಥಗಿತ ಗೊಳಿಸಬಾರದು. ಅಗತ್ಯ ವಸ್ತುಗಳ ಬೆಲೆ ಏರಿಕೆಗನುಗುಣವಾಗಿ ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಿದರು.ಸಾಂಕೇತಿಕವಾಗಿ ಇಂದು ಪ್ರತಿಭಟನೆ ನಡೆಸಲಾಗು ತ್ತಿದ್ದು,ಬೇಡಿಕೆ ಈಡೇರ ದಿದ್ದಲ್ಲಿ ಅ.17ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸ ಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ಸಿ.ಐ.ಟಿ.ಯು ಪ್ರಮುಖ ಸುಭಾಸ್ ಕೊಪ್ಪೀಕರ್, ಅ.ದಾ.ನೌ.ಸಂಘದ ಅಧ್ಯಕ್ಷೆ ಗೀತಾ ಗಣಪತಿ ನಾಯ್ಕ, ಕಾರ್ಯದರ್ಶಿ ಗುಲಾಬಿ ನಾಯ್ಕ, ಖಜಾಂಚಿ ಕೋಮಲ ದೇವಾಡಿಗ ಸೇರಿದಂತೆ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry