ಮಂಗಳವಾರ, ಮೇ 18, 2021
24 °C

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಇಲ್ಲಿನ ಮಿನಿ ವಿಧಾನ ಸೌಧ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಸೋಮವಾರ ಧರಣಿ ನಡೆಸಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಮಾತ ನಾಡಿ, ಮಳೆ ಮತ್ತು ಅಂತರ್ಜಲದ ಮೇಲೆ ಕೃಷಿ ಅವಲಂಬಿತವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದ್ದು ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಗ್ರಾಮ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ದನಕರುಗಳಿಗೆ ಆಹಾರ ಮತ್ತು ನೀರಿನ ಅಭಾವ ತೀವ್ರಗೊಂಡಿದೆ. ಬರ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿ ಕೆಲಸ ಜಾರಿಗೊಳಿಸ ಬೇಕೆಂದು ಒತ್ತಾಯಿಸಿದರು.ಸಂಘದ ತಾಲ್ಲೂಕು ಕಾರ್ಯದರ್ಶಿ ಪಿ.ಆರ್.ನವೀನ್‌ಕುಮಾರ್ ಮಾತ ನಾಡಿ, ಡಾ. ಪರಮಶಿವಯ್ಯ ವರದಿ ಆಧರಿಸಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಕುಡಿ ಯುವ ನೀರಿನ ಸಮಸ್ಯೆ ಇರುವ ಹಳ್ಳಿ ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸ ಬೇಕು.

 

ಜಾನುವಾರುಗಳ ಉಳಿವಿಗಾಗಿ ಗೋಕುಂಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸಬೇಕು. ಜಾನು ವಾರು ಮೇವಿಗೆ ಸರ್ಕಾರ ಉಚಿತ ಅಥವಾ ರಿಯಾಯಿತಿ ದರದಲ್ಲಿ ಪಶು ಆಹಾರವನ್ನು ನೇರವಾಗಿ ರೈತರ ಮನೆ ಗಳಿಗೆ ತಲುಪಿಸಬೇಕು. ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ ಮಾಡದೆ ಜನರಿಗೆ ಕೆಲಸ ನೀಡಬೇಕು.ಎನ್‌ಆರ್‌ಇಜಿ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸ ಬೇಕು. ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿರುವುದರಿಂದ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಆಹಾರ ಪದಾರ್ಥ ವಿತರಿಸಬೇಕು ಹಾಗೂ ಪ್ರತಿ ದಿನ 10 ಗಂಟೆ ಕಾಲ ಗ್ರಾಮೀಣ ಪ್ರದೇಶಕ್ಕೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ವೀರಪ್ಪರೆಡ್ಡಿ, ಸಹ ಕಾರ್ಯದರ್ಶಿ ವಿ.ಆನಂದ್, ಸಿ.ವಿ. ಮೋಹನ್ ಖಚಾಂಚಿ ವೆಂಕಟರೆಡ್ಡಿ, ಉಪಾಧ್ಯಕ್ಷರಾದ ಬೈರಪ್ಪ, ರಾಜಾ ರೆಡ್ಡಿ, ವೆಂಕಟರಾಯಪ್ಪ, ಸಿ.ಎಂ.ಗೌಡ, ಚಿಕ್ಕವೆಂಕಟೇಶ್, ರಾಮಚಂದ್ರ, ವಿಶ್ವನಾಥ್, ಪಿ.ಎಂ.ಶ್ರೀನಿವಾಸ್, ಜಿ.ಎಂ. ಕಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಮೆ ಬದಲಿಗೆ ವಿರೋಧ

ಇಲ್ಲಿನ ಮಿನಿ ವಿಧಾನಸೌಧದ ಎದುರು ಸ್ಥಾಪಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸಬಾರದು ಎಂದು ಕರ್ನಾಟಕ ಸಮತಾ ಸೈನಿಕ ದಳದ ಮಹಿಳಾ ಘಟಕದ ಅಧ್ಯಕ್ಷೆ ರಾಮಾಂಜಮ್ಮ ಆಗ್ರಹಿಸಿದ್ದಾರೆ.ಈ ಪುತ್ಥಳಿ ಸ್ಥಾಪನೆ ಹಿಂದೆ ಒಂದು ಹೋರಾಟದ ಇತಿಹಾಸವಿದೆ. ಆದರೆ ಈಗ ಕೆಲವು ದಲಿತ ಮುಖಂಡರ ಮಾತಿಗೆ ಕಿವಿಗೊಟ್ಟು ಪುತ್ಥಳಿಯನ್ನು ಬದಲಾಯಿಸಲು ಮುಂದಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆದಾಗ ಸುಮ್ಮನಿರುವ ನಾಯಕರು ಪುತ್ಥಳಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ.

 

ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಈಚೆಗೆ ಸುದ್ದಿಗೋಷ್ಠಿ ಯಲ್ಲಿ ಹೇಳಿದರು. ದಲಿತ ಮುಖಂಡ ರಾದ ಅತ್ತಿಕುಂಟೆ ರಾಮಪ್ಪ, ರಾಮು ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.