ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

7

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

Published:
Updated:

ಹುಬ್ಬಳ್ಳಿ: ಹಲವಾರು ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ಇಲ್ಲಿಯ ಕೊಯಿನ್ ರಸ್ತೆ ಯಲ್ಲಿಯ ಹುಬ್ಬಳ್ಳಿ ಕೋ-ಆಪ್ ಹಾಸ್ಪಿಟಲ್‌ನ ನೌಕರರು ಸೋಮವಾರದಿಂದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಆರಂಭಿಸಿದ್ದು, ಶುಕ್ರವಾರ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ನಂತರ ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಪ್ರತಿಕೃತಿಗಳನ್ನು ಕಿತ್ತೂರು ಚನ್ನಮ್ಮ ಸರ್ಕಲ್ ಬಳಿ ದಹಿಸಿದರು.`ಆಸ್ಪತ್ರೆಯ ಕಾರ್ಮಿಕರಿಗೆ ಒಪ್ಪಂದದ ಪ್ರಕಾರ ಸಂಬಳವನ್ನು ನಿಗದಿತ ಸಮಯಕ್ಕೆ ನೀಡಬೇಕು ಎನ್ನುವುದರ ಜೊತೆಗೆ ಇತರ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ವನ್ನು ಆರಂಭಿಸಲಾಗಿದೆ~ ಎಂದು ಆಸ್ಪತ್ರೆಯ ನೌಕರರ ಸಂಘದ ಅಧ್ಯಕ್ಷ ಅಶೋಕ ಅಣ್ವೇಕರ ತಿಳಿಸಿದರು.`ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಸ್ಪತ್ರೆ ಕಾರ್ಮಿಕರ ಹೋರಾಟದೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಆಸ್ಪತ್ರೆಯ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಗೊಳಿಸ ಬೇಕು. ಜೊತೆಗೆ ಜಿಲ್ಲಾಧಿಕಾರಿಯನ್ನು ನೇಮಿಸಿ, ಆಸ್ಪತ್ರೆಯನ್ನು ಅಭಿವೃದ್ಧಿ ಗೊಳಿಸಬೇಕು~ ಎಂದು ಅಣ್ವೇಕರ ಆಗ್ರಹಿಸಿದರು.ಬೆಂಬಲ: ಈ ಮುಷ್ಕರಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಬೆಂಬಲ ನೀಡಿದೆ. ಶುಕ್ರವಾರ ನಡೆದ ಪ್ರತಿಭಟನಾ ಮೆರ ವಣಿಗೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಅಷ್ಪಾ ಕ್ ಕುಮಟಾಕರ, ಪ್ರವೀಣ ಕಟ್ಟಿ, ಶ್ರೀನಿವಾಸ ಮುರ ಗೋಡ, ಸಿದ್ಧು ಹಿರೇಮಠ, ಶ್ರೀನಿವಾಸ ಕ್ಯಾರ ಕಟ್ಟಿ, ರವಿ ಬಡ್ನಿ, ವಿಜಯ್ ಸಂಸ್ಥಾನಮಠ, ಮಂಜು ನಾಥ ಉಳ್ಳಾಗಡ್ಡಿ ಮೊದಲಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry