ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಒತ್ತಾಯ

7

ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಒತ್ತಾಯ

Published:
Updated:

ಚಿಕ್ಕಬಳ್ಳಾಪುರ: ಗುತ್ತಿಗೆ ನೌಕರರನ್ನು ಕಾಯಂ ಗೊಳಿಸುವುದು, ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಪಡಿಸುವುದು, ಬೆಲೆ ಏರಿಕೆ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಫೆ.28ರಂದು ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಘ ಸಂಸ್ಥೆಗಳು ಸಿದ್ಧತೆ ನಡೆಸಿವೆ.ದೇಶವ್ಯಾಪಿ ಕರೆಗೆ ಬೆಂಬಲಿಸಿ ಅಂದು ಜಿಲ್ಲೆ ಯಾದ್ಯಂತ ಮುಷ್ಕರ ನಡೆಸಲು ತೀರ್ಮಾನಿ ಸಿರುವ ಸಾಮೂಹಿಕ ಸಂಘಟನೆಗಳು, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಿವೆ. ಸಾಮೂಹಿಕ ಸಂಘಟನೆಗಳ ಮುಖಂ ಡರು, ಸದಸ್ಯರು ಮುಂತಾ ದವರು ಅಂದು ಕೆಲಸಕಾರ್ಯಗಳನ್ನು ಸ್ಥಗಿತ ಗೊಳಿಸಿ, ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿ ಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘ, ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘ, ಜಿಲ್ಲಾ ಅಂಗನವಾಡಿ ನೌಕರರ ಮತ್ತು ಸಹಾಯಕಿಯರ ಸಂಘ ಮತ್ತು ಜಿಲ್ಲಾ ಅಕ್ಷರದಾಸೋಹ ಸಂಘದ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಲಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.`ಬೆಲೆ ಏರಿಕೆ ನಿಯಂತ್ರಿಸುವುದು, ಗುತ್ತಿಗೆ ಪದ್ಧತಿ ನಿಷೇಧಿಸುವುದು, ಕನಿಷ್ಠ ಕೂಲಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಕೇವಲ ಭರವಸೆಗಳನ್ನು ನೀಡುತ್ತಿರುವ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಕಾರ್ಮಿಕರ ಒಗ್ಗಟ್ಟಿನಿಂದ ಹೋರಾಟ ಮುಂದುವರೆಸಲು ಫೆಬ್ರುವರಿ 28ರಂದು ಮುಷ್ಕರ ನಡೆಸಲಾಗುತ್ತಿದೆ~ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ `ಪ್ರಜಾ ವಾಣಿ~ಗೆ ತಿಳಿಸಿದರು.`ಮುಷ್ಕರ ಯಶಸ್ವಿಗೊಳಿಸಲೆಂದೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಮಾಡಲಾಗುತ್ತಿದ್ದು, ವಾಸ್ತವ ಸಂಗತಿಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಂದು ಗ್ರಾಮಪಂಚಾಯಿತಿ ನೌಕರರು, ಆಶಾ ಕಾರ್ಯಕರ್ತೆಯರು, ಅಕ್ಷರದಾಸೋಹ ಕಾರ್ಯ ಕರ್ತೆಯರು, ಅಂಗನವಾಡಿ ನೌಕರರು ಮತ್ತು ಸಹಾ ಯಕಿಯರು ಮುಂತಾದವರು ಅಂದು ಕೆಲಸ ಕಾರ್ಯವನ್ನು ಬಹಿಷ್ಕರಿಸಿ, ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.  ಬ್ಯಾಂಕ್ ನೌಕರರು, ಜೀವವಿಮಾ ನೌಕರರು ಸೇರಿದಂತೆ ಇತರ ನೌಕರರು ಪಾಲ್ಗೊಳ್ಳಲಿದ್ದಾರೆ~ ಎಂದು ಅವರು ಹೇಳಿದರು.`ಬೇರೆ ಬೇರೆ ರೀತಿಯ ಸಿದ್ಧಾಂತ ಮತ್ತು ರಾಜಕೀಯ ಧೋರಣೆಗಳಿದ್ದರೂ ಕಾರ್ಮಿಕರ ಹಿತ ಕಾಯುವ ಏಕೈಕ ಉದ್ದೇಶದಿಂದ ಬಹುದಿನಗಳ ನಂತರ ಹನ್ನೊಂದು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕೈಜೋಡಿಸಿವೆ. ಸಿಐಟಿಯು, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿ ಯುಸಿ), ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿ ಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಯೂನೈ ಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿ ಯುಸಿ), ಅಖಿಲ ಭಾರತ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿ ಸಿಟಿಯು), ಅಖಿಲ ಭಾರತ ಯೂನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ), ಟ್ರೇಡ್ ಯೂನಿ ಯನ್ ಕೋ-ಆರ್ಡಿ ನೇಷನ್ ಕಮಿಟಿ (ಟಿಯುಸಿಸಿ), ಬಿಎಂಎಸ್, ಎಲ್‌ಪಿಎಫ್, ಎಚ್‌ಎಂಎಸ್ ಮುಂತಾದ ಸಂಘಟನೆಗಳು ಮುಷ್ಕರದಲ್ಲಿ ಭಾಗ ವಹಿಸಲಿವೆ. ಇದಕ್ಕೆಂದೇ ಅಂತಿಮ ಹಂತದ ಸಿದ್ಧತೆ ಮುಂದುವರೆದಿದೆ~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry