ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ

7

ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ

Published:
Updated:

ಸೋಮವಾರಪೇಟೆ: ಕಾನೂನು ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಗದ ಕಾರಣ ದಲಿತರಿಗೆ ಅನ್ಯಾಯವಾ ಗುತ್ತಿದೆ. ಕೂಡಲೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ  ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ  ನಡೆಯಿತು. ನಗರದ ಅಂಬೇಡ್ಕರ್ ಪ್ರತಿಮೆ ಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ನಗರದ ಬೀದಿಯಲ್ಲಿ ಮೆರವಣಿಗೆ ನಡೆಸಿದರು.ದಲಿತರ ಸಾಮಾಜಿಕ ಆರ್ಥಿಕ ಸುಧಾರಣೆಗಾಗಿ ಸಂವಿಧಾನದಲ್ಲಿ ಅನೇಕ ಕಾನೂನುಬದ್ಧ ಅವಕಾಶ ಕಲ್ಪಿಸಿಕೊಡಲಾಗಿದೆ. ಭೂಮಿ ಪರಭಾರೆ (ಪಿಟಿಸಿಎಲ್) ಕಾಯ್ದೆ ದಲಿತರ ಪರವಾದ ಆಶಯಗಳನ್ನು ಹೊಂದಿ ್ದದರೂ ಸಹ ಕಾನೂನು ಜಾರಿಗೊಳಿಸ ಬೇಕಾದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ ದೂರಿದರು.ಒಂದು ತಿಂಗಳೊಳಗೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಸಂಘಟನೆಯ ಮಹಿಳಾ ವಿಭಾಗದ ಜಿಲ್ಲಾ ಸಂಯೋಜಕಿ ಜೆ.ಕೆ.ಶೃತಿ, ತಾಲ್ಲೂಕು ಸಂಯೋಜಕ ದೇವರಾಜ್ ಕೂಡ್ಲೂರು, ಪ್ರಮುಖರಾದ ಡಿ.ಬಿ.ಕೇಶವ, ಜೆ.ಎಲ್. ಜನಾರ್ದನ್, ಜಯಪ್ಪ ಹಾನ್‌ಗಲ್, ಹನುಮಯ್ಯ, ಬೂದನೂರು ರಾಜು, ನಾಗರಾಜ್ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry