ಬೇಡಿಕೆ ಈಡೇರಿಕೆಗೆ ನೌಕರರ ಆಗ್ರಹ

7

ಬೇಡಿಕೆ ಈಡೇರಿಕೆಗೆ ನೌಕರರ ಆಗ್ರಹ

Published:
Updated:
ಬೇಡಿಕೆ ಈಡೇರಿಕೆಗೆ ನೌಕರರ ಆಗ್ರಹ

ಹೊಳಲ್ಕೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಗ್ರಾಮ ಪಂಚಾಯ್ತಿ ನೌಕರರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಬಿಲ್ ಕಲೆಕ್ಟರ್‌ಗಳು, ನೀರಗಂಟಿಗಳು ಮತ್ತು ಜವಾನರು, ಸ್ವಚ್ಛಗಾರರಿಗೆ ಒಂದು ವರ್ಷದಿಂದ ವೇತನ ನೀಡಿಲ್ಲ. ಸರ್ಕಾರ ಎ್ಲ್ಲಲ ಜಿಲ್ಲಾ ಪಂಚಾಯ್ತಿಗಳಿಗೆ ಅನುದಾನ ನೀಡಿದ್ದರೂ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿಲ್ಲ. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ವೇತನವಿಲ್ಲದೆ ನೌಕರರು ಜೀವನ ನಡೆಸುವುದು ದುಸ್ತರವಾಗಿದೆ. ವೇತನ ಬಿಡುಗಡೆಯ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.ಹೊಸ ವೇತನದಂತೆ ಬಿಲ್ ಕಲೆಕ್ಟರ್‌ಗಳಿಗೆ ್ಙ 5,735, ನೀರಗಂಟಿಗಳಿಗೆ ್ಙ 5,624, ಜವಾನರಿಗೆ ್ಙ 5,403, ಸ್ವಚ್ಛಗಾರರಿಗೆ ್ಙ 4,300 ಮತ್ತು ಬಾಕಿ ವೇತನ ಕೊಡಬೇಕು. ಸರ್ಕಾರಿ ಆದೇಶದಂತೆ ಗ್ರಾಮ ಪಂಚಾಯ್ತಿಗಳಲ್ಲಿ 2008ರಿಂದ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ಕಡತಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಪಡೆಯಬೇಕು. ಅನುಮೋದನೆ ಆಗುವವರೆಗೂ ಸರ್ಕಾರಿ ಆದೇಶದಂತೆ ವೇತನ ನೀಡಬೇಕು.ನೀರಗಂಟಿ, ಜವಾನ ಮತ್ತು ಸ್ವಚ್ಛಗಾರರಿಗೆ ಜ್ಯೇಷ್ಠತೆಯ ಆಧಾರದಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು ಎಂದು ಅವರು ಆಗ್ರಹಿಸಿದರು.ಪ್ರತೀ ನೌಕರನಿಗೂ ಸೇವಾ ಪುಸ್ತಕ ತೆರೆಯಬೇಕು. ಎಲ್ಲರಿಗೂ ಜನಶ್ರೀ ಭೀಮಾ ಯೋಜನೆ ಜಾರಿಗೊಳಿಸಬೇಕು. ನೌಕರರಿಗೆ ಬೈಸಿಕಲ್, ಬ್ಯಾಟರಿ, ಸಮವಸ್ತ್ರ ನೀಡಬೇಕು. ಹಂತ ಹಂತವಾಗಿ ನೌಕರರಿಗೆ ಆಶ್ರಯ ಮನೆ ನೀಡಬೇಕು ಎಂದು ಅವರು ಒತ್ತಾಯಿಸಿ, ತಾಲ್ಲೂಕು ಪಂಚಾಯ್ತಿ ಇಒ ರಾಮಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಮಾರಪ್ಪ, ಷಡಕ್ಷರಿ, ರಮೇಶ್, ಪ್ರಭಾಕರ್, ಕುಮಾರಪ್ಪ, ಎನ್. ರಂಗಸ್ವಾಮಿ, ನಾಗರಾಜಪ್ಪ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry