ಬೇಡಿಕೆ ಈಡೇರಿಕೆಗೆ ಲಾರಿ ಮುಷ್ಕರ

7

ಬೇಡಿಕೆ ಈಡೇರಿಕೆಗೆ ಲಾರಿ ಮುಷ್ಕರ

Published:
Updated:

ಬೆಂಗಳೂರು: `ವಾಣಿಜ್ಯ ವಾಹನಗಳಿಗೆ ವೇಗ ನೀಯಂತ್ರಣ ಅಳವಡಿಸುವ ಆದೇಶ ಹಾಗೂ ಪ್ರವಾಸಿ ವಾಹನಗಳಿಗೆ ಜೀವಿತಾವಧಿ ತೆರಿಗೆ ಹಿಂದಕ್ಕೆ ಪಡೆಯಬೇಕೆಂದು ಜೂನ್ ಒಂದರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ~ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಬಿ.ಆರ್. ಷಣ್ಮುಗಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಸರ್ಕಾರವು ಲಾರಿ, ಟ್ಯಾಂಕರ್, ಸರಕು ಸಾಗಣೆ, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಸೇರಿದಂತೆ ರಸ್ತೆಯಲ್ಲಿ ಓಡಾಡುತ್ತಿರುವ ಎಲ್ಲ ವಾಣಿಜ್ಯ ವಾಹನಗಳಿಗೆ ಜೂನ್ 1 ರಿಂದ ವೇಗ ನಿಯಂತ್ರಣವನ್ನು ಅಳವಡಿಸಲು ಕಡ್ಡಾಯ ಮಾಡಿದ್ದು, ಇದರಿಂದ ವಾಹನಗಳು ತಲುಪಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ವೇಗ ನಿಯಂತ್ರಣವನ್ನು ಅಳವಡಿಸಲು 15 ಸಾವಿರ ಖರ್ಚಾಗಲಿದ್ದು, ನಂತರ ಅದು ಹಾಳಾದರೆ ದುರಸ್ತಿ ಮಾಡುವುದು ಬಹಳ ಕಷ್ಟವಾಗಲಿದೆ ಎಂದರು.ಸರ್ಕಾರದ ಆದೇಶದ ಪ್ರಕಾರ ದೇಶದೆಲ್ಲೆಡೆಯಿಂದ ವೇಗ ನಿಯಂತ್ರಕ ಅಳವಡಿಸದ ಯಾವುದೇ ವಾಣಿಜ್ಯ ವಾಹನ ರಾಜ್ಯದೊಳಗೆ ಪ್ರವೇಶಿಸುವಂತಿಲ್ಲ ಹಾಗೂ ರಾಜ್ಯದಿಂದ ಹೋಗುವಂತಿಲ್ಲ. ಈ ರೀತಿಯ ಅವೈಜ್ಞಾನಿಕ ನಿರ್ಧಾರವನ್ನು ವಿರೋಧಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕರ್ನಾಟಕ ಸರಕು ಸಾಗಣೆದಾರರ ಸಂಘ, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘ, ಗೂಡ್ಸ್ ಟೆಂಪೋ ಅಸೋಸಿಯೇಷನ್ ಸೇರಿದಂತೆ ರಾಜ್ಯದ ಎಲ್ಲ ಸಂಘಟನೆಗಳು ಬೆಂಬಲವನ್ನು ಸೂಚಿಸಿವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಕಾರ್ಯದರ್ಶಿ ಜಿ.ವಿ.ನಾರಾಯಣಪ್ಪ, ಗೂಡ್ಸ್ ಟ್ರಕ್ ಅಸೋಸಿಯೇಷನ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟೆಂಪೋ ಬಾಬು ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry