ಸೋಮವಾರ, ಏಪ್ರಿಲ್ 12, 2021
22 °C

ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕೃಷಿ ಕೂಲಿಕಾರರು ಮತ್ತು ಪಂಚಾಯ್ತಿ ನೌಕರರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ನೂರಾರು ಕಾರ್ಯಕರ್ತರು ಮಧ್ಯಾಹ್ನ 12 ಗಂಟೆಯಲ್ಲಿ ಪಟ್ಟಣದ ಡಾ. ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡು ಬೇಡಿಕೆಗಳ ಪರವಾಗಿ ಘೋಷಣೆ ಕೂಗುತ್ತ ಮೆರವಣಿಗೆ ಹೊರಟರು.  ತಹಶೀಲ್ದಾರ್ ಬಿ.ಸಿ.ಶಿವಾನಂದ ಮೂರ್ತಿ ಸ್ಥಳಕ್ಕೆ ಆಗಮಿಸಿದಾಗ ಪ್ರತಿ ಭಟನಾಕಾರರು ಹಾಗೂ ತಹಶೀ ಲ್ದಾರ್ ನಡುವೆಯು ಕೂಡ ವಾಗ್ವಾದ ನಡೆಯಿತು. ನಂತರ ತಹಶೀಲ್ದಾರ್ ಮಿನಿ ವಿಧಾನಸೌಧದ ಬಳಿ ಮೆರವಣಿಗೆ ಬರಲು ಅನುಮತಿ ನೀಡಿದರು.ಕೃಷಿ ಕೂಲಿಕಾರರ ಎಲ್ಲ ಕುಟುಂಬಗಳಿಗೂ ಒಂದೇ ರೀತಿಯ ರೇಷನ್ ಕಾರ್ಡ್‌ಗಳನ್ನು ವಿತರಿಸಬೇಕು. ತಿಂಗಳಿಗೆ ಕನಿಷ್ಠ 35 ಕೆ.ಜಿ ಅಕ್ಕಿ, ಗೋಧಿಯನ್ನು ಕೆ.ಜಿ.ಗೆ 2 ರೂ. ದರದಲ್ಲಿ ಒದಗಿಸಬೇಕು. ರೈತರಿಗೆ ವ್ಯವಸಾಯ ಹಾಗೂ ಇತರ ಅವಶ್ಯಕತೆ ಗಳಿಗಾಗಿ ಶೇ. 1ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಒದಗಿಸ ಬೇಕು. ಸಾಲ ಕ್ಕಾಗಿ ಅರ್ಜಿ ಹಾಕಿಕೊಂಡವರಿಗೆ ತಕ್ಷಣ ಸಾಲ ನೀಡಬೇಕು ಎಂದು  ಸರ್ಕಾರ ವನ್ನು ಒತ್ತಾಯಿಸಿದರು.ತಹಶೀಲ್ದಾರ್ ಅವರು ಪ್ರತಿಭಟನಾ ಕಾರರ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದ ನಂತರ ಪ್ರತಿಭಟನೆ ಕೊನೆ ಗೊಂಡಿತು. ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಸುರೇಂದ್ರ, ಮುಖಂಡ ಬಿ.ನಾಗರಾಜು ಗ್ರಾಮ ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್.ಲೋಕೇಶ್ ಖಜಾಂಚಿ ಜಯರಾಮು, ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.