ಬೇಡಿಕೆ ಈಡೇರಿಸಲು ಶುಶ್ರೂಷಕರ ಆಗ್ರಹ

6

ಬೇಡಿಕೆ ಈಡೇರಿಸಲು ಶುಶ್ರೂಷಕರ ಆಗ್ರಹ

Published:
Updated:

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಆಸ್ಪತ್ರೆಗಳ ಶುಶ್ರೂಷಕರು ಜಿಲ್ಲಾ ಶುಶ್ರೂಷಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಶುಶ್ರೂಷಾ ವಿದ್ಯಾಲಯ ಹಾಗೂ ಶುಶ್ರೂಷಾ ನಿರ್ದೇಶನಾಲಯ ಸ್ಥಾಪಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಸರ್ಕಾರಿ ವಸತಿ ಗೃಹಗಳನ್ನು ಶುಶ್ರೂಷಾ ಸಿಬ್ಬಂದಿಗೆ ಮೀಸಲಿಡಲು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಮೂಲಸೌಕರ್ಯ ಹಾಗೂ ಸಲಕರಣೆ ಒದಗಿಸಬೇಕು. ಗುತ್ತಿಗೆ ಆಧಾರಿತ ನೇಮಕಾತಿ ರದ್ದುಪಡಿಸಿ, ನೇರ ನೇಮಕಾತಿ ಮೂಲಕ ಕಾಯಂ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದಿಂದ ಪ್ರತಿಭಟನಾ ಜಾಥಾ ಹೊರಟು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಯಿತು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಸ್. ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಅಧ್ಯಕ್ಷೆ ಎಸ್.ಕೆ. ತಿಮ್ಮಾಪುರ್, ಮುಖ್ಯ ಸಲಹೆಗಾರ ಎಚ್. ದುರ್ಗಪ್ಪ, ಶಿವಾಜಿರಾವ್, ಮೀನಾಕ್ಷಿ ಕಂಟ್ರಾಕ್ಟರ್, ಕೃಷ್ಣಮ್ಮ, ಲಕ್ಷ್ಮೀದೇವಮ್ಮ, ಆಶಾ ಕಾಂಬ್ಳೆ, ಚಂದ್ರಶೇಖರ್, ವಿಜಯಲಕ್ಷ್ಮೀ, ಎಂ.ಕೆ. ಇಂದಿರಾ, ಗದಿಗೆಮ್ಮ, ದೇವರಹಳ್ಳಿ ರಂಗಮ್ಮ, ವಿಶಾಲಾಕ್ಷಿ, ನಿರ್ಮಲಾ, ಸುಶೀಲಾ ಹುಳ್ಳೆರಾ, ಲಕ್ಷ್ಮೀ, ಜೈತುನ್ನಿಸಾ, ಕಿತ್ತೂರು, ಅಶ್ಪಕ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry