ಸೋಮವಾರ, ಜೂನ್ 21, 2021
30 °C

ಬೇಬಿ ಗ್ರಾಮ : ಸಮಸ್ಯೆ ದೊಡ್ಡದು

ಎಚ್. ಪ್ರಕಾಶ್ Updated:

ಅಕ್ಷರ ಗಾತ್ರ : | |

ಪಾಂಡವಪುರ: ಈ ಗ್ರಾಮದ ಹೆಸರು `ಬೇಬಿ~. ಆದರೆ, ಸಮಸ್ಯೆಗಳು ಮಾತ್ರ ಚಿಕ್ಕದಲ್ಲ!. ಸುಮಾರು 4 ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಹಳೆಯ ಸಮಸ್ಯೆಗಳು ಹಾಗೇ ಉಳಿದಿದ್ದು, `ನಾಳೆ~ಯ ನಿರೀಕ್ಷೆಯಲ್ಲೇ ಜನ ದಿನ ದೂಡುತ್ತಿದ್ದಾರೆ.ಈ ಗ್ರಾಮ ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಊರಿ ನಿಂದ ಸುಮಾರು 500 ಮೀ. ನಷ್ಟು ದೂರದ ಕೊಳವೆಬಾವಿ ಪೈಪ್‌ಲೈನ್ ಮೂಲಕ ನಲ್ಲಿಗಳಿಗೆ 3 ದಿನಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತದೆ. ಅದು, 30 ನಿಮಿಷ ಮಾತ್ರ. ಹಾಗಾಗಿ, ಕುಡಿಯುವ ನೀರಿಗೆ ಹಾಹಾಕಾರ.ಸುವರ್ಣಗ್ರಾಮ ಯೋಜನೆ, ಈ ಗ್ರಾಮಕ್ಕೆ 2 ವರ್ಷಗಳ ಹಿಂದೆಯೇ ಕಾಲಿಟ್ಟರೂ, ಕೆಲಸಗಳು ಕುಂಟುತ್ತಾ ಸಾಗಿವೆ. ಕೇವಲ 22 ಲಕ್ಷ ರೂಪಾಯಿ ಹಣ ಮಾತ್ರ ಮಂಜೂರಾತಿ ಆಗಿದ್ದು, ಗ್ರಾಮದ ಒಂದೆರೆಡು ಬೀದಿಗಳಿಗೆ ಡಾಂಬರೀಕರಣ ಮಾಡಿ ಕೈತೊಳೆದು ಕೊಳ್ಳಲಾಗಿದೆ. ಚರಂಡಿಗಳು ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ. ಗ್ರಾಮ ದೊಳಗಿನ ತಿಪ್ಪೆಗುಂಡಿಗಳು ಬೇರೆಡೆಗೆ ವಿಲೇವಾರಿ ಯಾಗದೆ ಅನೈರ್ಮಲ್ಯಕ್ಕೆ ಕಾರಣವಾಗಿವೆ.ಆರೋಗ್ಯ ಸೌಲಭ್ಯಗಳನ್ನು ಪಡೆಯುಲು ಇಲ್ಲಿನ ಜನರು ಸುಮಾರು 7 ಕಿ.ಮೀ ದೂರ ುಳ್ಳ ಚಿನಕುರಳಿಗೆ ಅಥವಾ ಅರಳಕುಪ್ಪೆಗೆ ಹೋಗಬೇಕಾಗಿದೆ. ಪ್ರಯಾಣಕ್ಕೆ ಕೇವಲ ಒಂದು ಬಸ್ ಮಾತ್ರ ದಿನಕ್ಕೊಂದು ಬಾರಿ ಗ್ರಾಮಕ್ಕೆ ಸಂಚರಿಸುತ್ತದೆ!ಈ ಗ್ರಾಮದ ಕೂಗಳೆತೆ ದೂರದಲ್ಲಿರುವ ಬೆಟ್ಟದ ಸುತ್ತುಮುತ್ತ ಕಲ್ಲು ಗಣಿಗಾರಿಕೆ ನಿತ್ಯ ಸಂಜೆಯಿಂದ ಮಧ್ಯೆರಾತ್ರಿ ವರೆಗೆ ನಡೆಯು ತ್ತಿರುತ್ತದೆ. ಇದಕ್ಕೆ ಬಳಸುವ ಸಿಡಿಮದ್ದುಗಳು ಮತ್ತು ರಿಗ್‌ಬೋರ್ ಬ್ಲಾಸ್ಟ್‌ನಿಂದ ಭೂಮಿ ನಡುಗಿದಂತಾಗಿ ಆತಂಕದಿಂದ ಬೆಚ್ಚಿ ಬೀಳುವುದು ಸಾಮಾನ್ಯವಾಗಿಬಿಟ್ಟಿದೆ ಎನ್ನುತ್ತಾರೆ ಗ್ರಾಮದ ಯುವಕ ಗಿರೀಶ್.`ಮೂರು ದಿನಕ್ಕೊಮ್ಮೆ ಅರ್ಧ ತಾಸು ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ಕೇವಲ 20 ರಿಂದ 25 ಬಿಂದಿಗೆ ನೀರು ಸಿಗುವುದೇ ಹೆಚ್ಚು. ಹೀಗಾಗಿ, ಕುಡಿಯವುದಕ್ಕೆ ಹಾಗೂ ಇನ್ನಿತರ ಉಪಯೋಗಕ್ಕೆ ನೀರಿನ ಸಾಲುತ್ತಿಲ್ಲ. ಈ ಸಮಸ್ಯೆಯೇ ನಮ್ಮನ್ನು ದೊಡ್ಡದಾಗಿ ಕಾಡುತ್ತಿದೆ~ ಎಂದು ಭಾಗ್ಯಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.ನಮ್ಮ ಗ್ರಾಮ 4 ಜನ ಗ್ರಾ.ಪಂ.ಸದಸ್ಯರನ್ನು ಹೊಂದಿದ್ದರೂ ಅಧ್ಯಕ್ಷರಾಗಲಿ, ಅಭಿವೃದ್ದಿ ಅಧಿಕಾರಿಗಳಾಗಲಿ ಅಭಿವೃದ್ಧಿಯ ಬಗ್ಗೆ ಗಮನಹರಿಸಿಲ್ಲ ಎಂದು ಗ್ರಾಮದ ಚಂದ್ರಶೇಖರ್, ಮಹಾದೇವಪ್ಪ, ಮಾಯಮ್ಮ ತಮ್ಮ ಬೇಸರ ಹಂಚಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.