ಶನಿವಾರ, ಮೇ 28, 2022
24 °C

ಬೇರೆ ವಿ.ವಿಗೆ 435 ಭಾರತೀಯ ವಿದ್ಯಾರ್ಥಿ ಸ್ಥಳಾಂತರಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾ ಮೂಲದ `ಶ್ಯಾಮ್~ ಟ್ರೈ-ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಹೆಸರು ದಾಖಲಿಸಿರುವ ಸುಮಾರು 1,000 ಭಾರತೀಯ ವಿದ್ಯಾರ್ಥಿಗಳ ವಲಸೆ ವಂಚನೆ ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿರುವ ಅಮೆರಿಕ ಆಡಳಿತವು, ಇವರಲ್ಲಿ 435 ಮಂದಿಯನ್ನು ಬೇರೆ ವಿವಿಗೆ ಸ್ಥಳಾಂತರಿಸಲು ಒಪ್ಪಿಗೆ ನೀಡಿದೆ.ಸಾಮೂಹಿಕ ವಲಸೆ ವಂಚನೆ ಆರೋಪದ ಮೇಲೆ ಈ ವರ್ಷಾರಂಭದಲ್ಲಿ ದಾಳಿ ನಡೆಸಿ, ವಿವಿಯನ್ನು ಮುಚ್ಚಿಸಿದ್ದ ಅಮೆರಿಕದ ಆಂತರಿಕ ಭದ್ರತಾ ಇಲಾಖೆ, ವಿದೇಶಾಂಗ ಇಲಾಖೆ, ವಲಸೆ ಮತ್ತು ಸುಂಕ ಜಾರಿ ಸೇವೆ ಹಾಗೂ ಪೌರತ್ವ ಮತ್ತು ವಲಸೆ ಸೇವೆಗಳ ಅಧಿಕಾರಿಗಳು ಶುಕ್ರವಾರ ಇಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಭೇಟಿಯಾಗಿ ವಿವಿ ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ ನಂತರ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.ವಿ.ವಿಯ 1000ಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳ ಪೈಕಿ 435 ಮಂದಿಯನ್ನು ಬೇರೆ ವಿ.ವಿಗೆ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಿದ ಈ ಅಮೆರಿಕ ಅಧಿಕಾರಿಗಳು, ಉಳಿದವರಲ್ಲಿ 145 ಮಂದಿಗೆ ಅನುಮತಿ ನಿರಾಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.