ಬೇವಿನ ಬುಡದಲ್ಲಿ ಲಕ್ಷ್ಮಿಉದ್ಭವ

7

ಬೇವಿನ ಬುಡದಲ್ಲಿ ಲಕ್ಷ್ಮಿಉದ್ಭವ

Published:
Updated:
ಬೇವಿನ ಬುಡದಲ್ಲಿ ಲಕ್ಷ್ಮಿಉದ್ಭವ

ಇಂಡಿ: ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಬಗಲಿ ಪ್ಲಾಟ್‌ಗಳ ಮಧ್ಯದಲ್ಲಿರುವ ಒಂದು ಬೇವಿನ ಮರದ ಬುಡದಲ್ಲಿ ಮಂಗಳವಾರ ಲಕ್ಷ್ಮಿ ಹುಟ್ಟಿಕೊಂಡಿದ್ದಾಳೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದ ಲಕ್ಷ್ಮಿದೇವಿಯ ಭಕ್ತರು ತಂಡೋಪ ತಂಡವಾಗಿ ಅಲ್ಲಿಗೆ ಭೇಟಿ ನೀಡಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.ಕೆಲವರು ಟೆಂಗಿನ ಕಾಯಿ ಒಡೆದು ಭಕ್ತ ತೋರಿಸಿದರೆ ಇನ್ನೂ ಕೆಲವರು ಲಕ್ಷ್ಮಿದೇವಿಗೆ ಉಡಿ ತುಂಬಿ ಭಕ್ತಿ ತೋರಿಸಿದರು.ಪಟ್ಟಣದಲ್ಲಿ ಇದೊಂದು ಪವಾಡವೆಂಬಂತೆ ಜನ ಸಾಗರ ಹರಿದು ಬಂದಿತ್ತು. ಮಂಗಳವಾರ ಸಂಜೆಯಾಗುತ್ತ ಬಂದರೂ ಕೂಡಾ ಭಕ್ತರ ಭೇಟಿ ಮುಂದುವರಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry