ಬೇವು: ಕಹಿ ಸಂಜೀವಿನಿ

7

ಬೇವು: ಕಹಿ ಸಂಜೀವಿನಿ

Published:
Updated:

ಕಹಿ ಸಂಜೀವಿನಿ ಎಂದೇ ಚಿರಪರಿಚಿತವಾದ ಬೇವು ನಮ್ಮ ದೇಶದ ಎಲ್ಲ ಕಡೆಯೂ ಕಂಡುಬರುತ್ತದೆ. ಸಂಸ್ಕೃತದಲ್ಲಿ ಬೇವನ್ನು `ಅರಿಷ್ಠ~ ಎಂದು ಕರೆಯುತ್ತಾರೆ. ಅರಿಷ್ಠ ಎಂದರೆ ರೋಗದಿಂದ ಬಿಡುಗಡೆ ಎಂದರ್ಥ.ಬೇವು ಬಹೂಪಯೋಗಿ ಮರ. ಈ ಮರ ಅತ್ಯಧಿಕ ಪ್ರಮಾಣದಲ್ಲಿ ಔಷಧಿಗೆ ಬಳಕೆಯಾಗುತ್ತದೆ. ಬೇವಿನ ಮರದ ಗಾಳಿಯನ್ನು ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಈ ಮರದ ತೊಗಟೆ, ಗೋಂದು, ಎಲೆ, ಹೂವು, ಚಿಗುರು, ಬೀಜದ ಎಣ್ಣೆ, ಹಿಂಡಿಯಂತಹ ಎಲ್ಲ ಭಾಗಗಳೂ ಒಂದಲ್ಲ ಒಂದು ಉಪಯೋಗಕ್ಕೆ ಬರುತ್ತವೆ.ಬೇವಿನ ಎಲೆ: ಬೇವಿನ ಚಿಗುರನ್ನು ಇತರ ತರಕಾರಿಗಳ ಜೊತೆ ಬೇಯಿಸಿ ತಿನ್ನುವುದರಿಂದ ಸಿಡುಬು ರೋಗವನ್ನು ತಡೆಗಟ್ಟಬಹುದೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಏಕೆಂದರೆ ಬೇವಿನಲ್ಲಿ ಇರುವ ಅಲ್ಕಲಾಯ್ಡ ಎಂಬ ರಾಸಾಯನಿಕವು ಸಿಡುಬು ರೋಗ ಹರಡುವ ಸೂಕ್ಷ್ಮ ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ಬಿಸಿ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹಲವಾರು ಚರ್ಮರೋಗಗಳನ್ನು ತಡೆಗಟ್ಟಬಹುದು.ಬೇವಿನ ಎಣ್ಣೆ: ಬೇವಿನ ಎಣ್ಣೆ ತಿನ್ನಲು ಯೋಗ್ಯವಲ್ಲದಿದ್ದರೂ ಕೃಷಿಯಲ್ಲಿ ಇದರ ಉಪಯೋಗ ಬಹಳ. ಹೀಗಾಗಿ ಬೇವಿನ ಮರ ಮತ್ತು ಅದರ ಉತ್ಪನ್ನಗಳ ಉಪಯೋಗ ಅನಿವಾರ್ಯ ಆಗಿರುವುದರಿಂದ, ಇದು ಒಂದು ನಿಸರ್ಗದತ್ತವಾದ ವರದಾನ ಎಂದೇ ಹೇಳಬಹುದು.

 

ದಂತರೋಗ ಇದೋ ಮನೆಮದ್ದು

ದಂತ ವೈದ್ಯರನ್ನು ಕಂಡು ಸೂಕ್ತವಾದ ಸಲಹೆಯನ್ನು ಪಡೆಯುವುದು ಹುಳುಕು ಹಲ್ಲಿಗೆ ತಕ್ಕ ಪರಿಹಾರವಾದರೂ, ತಾತ್ಕಾಲಿಕವಾಗಿ ಹುಳುಕು ಹಲ್ಲಿನ ಬಾಧೆಗಳನ್ನು ನಿವಾರಿಸುವ ಮನೆ ಮದ್ದುಗಳು ಹೀಗಿವೆ:ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ ಸುಟ್ಟು ಪುಡಿ ಮಾಡಬೇಕು. ಈ ಪುಡಿಯನ್ನು ಹುಳುಕು ಹಲ್ಲಿನ ಮೇಲಿಟ್ಟು ಮೃದುವಾಗಿ ತಿಕ್ಕಬೇಕು.ಒಂದು ಲವಂಗವನ್ನು ಪುಡಿ ಮಾಡಿ ಇದನ್ನು ಹುಳುಕು ಹಲ್ಲಿರುವ ಭಾಗಕ್ಕೆ ಒತ್ತಿಕೊಳ್ಳಬೇಕು. ಅರಿಶಿನದ ಕೊನೆಯನ್ನು ಸುಟ್ಟು ಪುಡಿ ಮಾಡಿಕೊಳ್ಳಬೇಕು. ಈ ಕಾಲು ಚಮಚ ಪುಡಿಗೆ ಸಮ ಪ್ರಮಾಣದಲ್ಲಿ ಉಪ್ಪು ಬೆರೆಸಿ ಹಲ್ಲುಗಳನ್ನು ಉಜ್ಜುವುದರಿಂದ ಹುಳುಕು ಹಲ್ಲಿನ ಬಾಧೆ ಶಮನವಾಗುತ್ತದೆ. ಅಲ್ಲದೆ ಇದು ಉತ್ತಮವಾದ ಕ್ರಿಮಿಹರವೂ ಆಗಿದೆ.ಬಾಯಿಹುಣ್ಣು: ನಾಲಿಗೆಯ ಅಂಚಿನಲ್ಲಿ ಬಾಯಿಹುಣ್ಣು ಬಂದರಂತೂ ಸ್ಪಷ್ಟವಾಗಿ ಮಾತನಾಡಲೂ ಅಸಾಧ್ಯವಾಗುತ್ತದೆ. ಬಾಯಿ ಹುಣ್ಣಿಗೆ ಹಲವಾರು ಕಾರಣಗಳಿದ್ದರೂ ದೀರ್ಘಕಾಲದ ಅಜೀರ್ಣ ಒಂದು ಮುಖ್ಯ ಕಾರಣವಾಗಿದೆ.ಮಕ್ಕಳ ಆಹಾರದಲ್ಲಿ `ಬಿ~ ಅನ್ನಾಂಗದ ಕೊರತೆ, ವಿಟಮಿನ್ `ಸಿ~ ಮತ್ತು ಕಬ್ಬಿಣ ಅಂಶದ ಕೊರತೆಯಿಂದಲೂ ಬಾಯಿ ಹುಣ್ಣು ಬರುತ್ತದೆ. ಅತಿಯಾದ ಧೂಮಪಾನ, ಮದ್ಯಪಾನ, ಹಲ್ಲು ಮತ್ತು ಒಸಡು ರೋಗಗಳು ಬಾಯಿ ಹುಣ್ಣನ್ನು ಉಂಟುಮಾಡುತ್ತವೆ. ಹೊಟ್ಟೆಯಲ್ಲಿ ಆಮ್ಲತೆ, ಆಮಶಂಕೆ ಕಾಣಿಸಿಕೊಂಡಾಗಲೂ ಬಾಯಿಹುಣ್ಣು ಬರುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry