ಶುಕ್ರವಾರ, ಜೂನ್ 18, 2021
23 °C

ಬೇಸಿಗೆಗೆ ತಂಪುಣಿಸುವ ಬಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆಗೆ ತಂಪುಣಿಸುವ ಬಗೆ

ಬಿಸಿಲಿನ್ನೂ ಆರಂಭವಾಗಿಲ್ಲ. ಆಗಲೇ ಮಾರುಕಟ್ಟೆಯಲ್ಲಿ ಸೂರ್ಯನನ್ನು ಹಣಿಯುವ ಹವಣಿಕೆ ಆರಂಭವಾಗಿದೆ. ತಂಪು ಕನ್ನಡಕ, ತಂಪು ಪಾನೀಯಗಳೊಂದಿಗೆ ಪ್ರಸಾಧನಗಳೂ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ.ಜೀವನಶೈಲಿಗೆ ಹೆಚ್ಚು ಪ್ರಾಮುಖ್ಯ ನೀಡುವ, ಜೀವನಶೈಲಿಯಲ್ಲಿ ಕ್ರೀಡೆ ಹಾಗೂ ವರ್ಣಮಯ ಅನುಭವ ಬೇಕೆನ್ನುವವರ ಮನೋಭಾವಕ್ಕೆ ತಕ್ಕಂತೆ ಪ್ಯೂಮಾ ಕಂಪೆನಿಯು ತಂಪು ಕನ್ನಡಕಗಳನ್ನು ಪರಿಚಯಿಸಿದೆ. ಗಾಢ ವರ್ಣಗಳಲ್ಲಿರುವ ಈ ಕನ್ನಡಕಗಳ ಬೆಲೆ ನಾಲ್ಕು ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ.ಚಾಲೀಸಿನ ನಂತರ ಚಾಳೀಸು ಎಂಬ ಮಾತೀಗ ಸುಳ್ಳಾಗಿದೆ. ಚಾಳೀಸು ಯಾವ ವಯಸ್ಸಿಗಾದರೂ ಸಲೀಸು ಎಂಬಂತೆ `ಟೈಟನ್ ಐ ಪ್ಲಸ್~ ಹೊಸ ಬಗೆಯ ಕನ್ನಡಕದ ಫ್ರೇಮುಗಳನ್ನು ಪರಿಚಯಿಸಿದೆ. ಸ್ವರೋಸ್ಕಿ ಹರಳು ಅಷ್ಟೇ ಅಲ್ಲ, ವಜ್ರಗಳನ್ನು ಅಲಂಕಾರಕ್ಕೆ ಬಳಸಿರುವ ಫ್ರೇಮುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತಿಳಿ ವರ್ಣ, ದಟ್ಟ ವರ್ಣಗಳಲ್ಲಿ ಕಾಣುವ ಈ ಫ್ರೇಮುಗಳು ಚಂದದೊಡನೆ ವೈಭವದ ನೋಟವನ್ನೂ ನೀಡುತ್ತದೆ ಎಂಬುದು `ಐ ಪ್ಲಸ್~ನ ಭರವಸೆ.ಪುರುಷರಿಗಾಗಿ ಹಾಗೂ ಮಹಿಳೆಯರಿಗಾಗಿ ವಿಭಿನ್ನವಾದ ವಿನ್ಯಾಸಗಳನ್ನು ಸಿದ್ಧ ಪಡಿಸಲಾಗಿದೆ. ಬೆಲೆ 3000 ರೂಪಾಯಿಗಳಿಂದ 6500 ರೂಪಾಯಿಗಳು. ಆರಾಮದಾಯಕ ಅನುಭವದೊಂದಿಗೆ ಗ್ಲಾಮರಸ್ ನೋಟ ದೊರೆಯುತ್ತದೆ ಎಂಬುದು ಕಂಪೆನಿಯ ಹೇಳಿಕೆಯಾಗಿದೆ.ಕಂಗಳ ಸ್ವಾಸ್ಥ್ಯ ಹಾಗೂ ಸೌಂದರ್ಯಕ್ಕೆ ಕನ್ನಡಕ ಕಂಪೆನಿಗಳು ಸಿದ್ಧವಾಗಿವೆ. ಕ್ಯಾಡ್‌ಬರಿ ಇಂಡಿಯಾ ಈ ಸಲವೂ ಮಾವಿನ ಮೋಜು ನೀಡಲು ಟ್ಯಾಂಗ್ ಮ್ಯಾಂಗೊ ಪರಿಚಯಿಸಿದೆ.ಹಣ್ಣಿನ ಪುಡಿ ಇರುವ ಈ ಪೊಟ್ಟಣದಿಂದ ತಂಪುಪಾನೀಯ ತಯಾರಿಸುವುದು ನೀರು ಕುಡಿದಷ್ಟೇ ಸುಲಭ. ಜೊತೆಗೆ ಪ್ರತಿ ಪಾನೀಯದಲ್ಲಿಯೂ ಹೇರಳವಾಗಿ ವಿಟಾಮಿನ್ ಎ, ಬಿ, ಸಿ, ಹಾಗೂ  ಯಥೇಚ್ಛ ಕಬ್ಬಿಣಾಂಶವೂ ಹೊಂದಿದೆ ಎನ್ನುವುದು ಕಂಪೆನಿಯ ಭರವಸೆಯಾಗಿದೆ.ಇನ್ನು ಟಾಟಾ ಟೀ ಟೆಟ್ಲೆಯನ್ನು ಮೂರು ವಿವಿಧ ಮಾಧುರ್ಯಗಳಲ್ಲಿ ಪರಿಚಯಿಸಿದೆ. ಸ್ವಾಸ್ಥ್ಯ ಹಾಗೂ ಉಲ್ಲಾಸ ನೀಡಲು ಈ ಪಾನೀಯ ಸಹಾಯಕ ಎಂದು ಹೇಳಿಕೊಂಡಿದೆ.ದಾಲ್ಚಿನ್ನಿ ಜೇನಿನ ಮಿಶ್ರಣ, ನಿಂಬೆ ಮತ್ತು ಪುದಿನಾ ಸ್ವಾದ ಹಾಗೂ ಅಲೊವೆರಾ ಸ್ವಾದಗಳಲ್ಲಿ ಈ ಪಾನೀಯಗಳು ಲಭ್ಯ ಇವೆ. ಮೂರು ಸ್ವಾದದ 10 ಸ್ಯಾಶೆಟ್ಟುಗಳ ಪ್ಯಾಕೆಟುಗಳು ಲಭ್ಯ. ಬೆಲೆ 50 ರೂಪಾಯಿ. ಬೇಸಿಗೆಯ ನಿರ್ವಹಣೆಗೆ ಮಾರುಕಟ್ಟೆಯಲ್ಲಿ ಏನೆಲ್ಲ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಲು ಲಗ್ಗೆ ಇಟ್ಟಿವೆ ಅಲ್ಲವೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.