ಮಂಗಳವಾರ, ಅಕ್ಟೋಬರ್ 15, 2019
26 °C

ಬೇಸಿಗೆಯಲ್ಲಿ ದ್ವಿದಳ ಧಾನ್ಯ ಬೆಳೆಗೆ ಸಲಹೆ

Published:
Updated:

ದೊಡ್ಡಬಳ್ಳಾಪುರ: ಬೇಸಿಗೆ ಅವಧಿಯಲ್ಲಿ ಕಡಿಮೆ ನೀರನ್ನು ಆಶ್ರಯಿಸುವ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಯುವ ಮೂಲಕ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಜಿ.ಎಂ.ಸುಜಿತ್ ಹೇಳಿದರು.ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆದ `ಬೇಸಿಗೆ ಬೆಳೆ ಯೋಜನೆ~ ಕುರಿತ ಚರ್ಚಾ ಕಾಯಕ್ರಮದಲ್ಲಿ ಅವರು ಮಾತನಾಡಿದರು.ಅಂತರ್ಜಲ ಮರು ಪೂರಣ ಕ್ರಮಗಳನ್ನು ಅಳವಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಾಗಲಿದೆ. ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿಯಲು ಬಿಡದೆ ಜಮೀನುಗಳಲ್ಲಿ ತಡೆ ಹಿಡಿಯಬೇಕು. ಇದರಿಂದ ಮಣ್ಣಿನ ಸವಕಳಿ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಲು ಅನುಕೂಲವಾಗಲಿದೆ. ಪ್ರತಿ ವರ್ಷ ಬೆಳೆ ಬೆಳೆಯುವ ಮುನ್ನ  ುಣ್ಣನ್ನು ರೈತರು ಪರೀಕ್ಷೆ ಮಾಡಿಸಬೇಕು ಎಂದರು.ಡಾ.ಎಸ್.ಎಂ.ಸವಿತಾ ಮಾತನಾಡಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಆರ್ಥಿಕವಾಗಿ  ಸದೃಢವಾಗ ಬೇಕು. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದರು. 

ಚರ್ಚೆಯಲ್ಲಿ ಡಾ. ಸಿ.ಪಿ. ಮಂಜಳಾ,  ಕೃಷಿಕರಾದ ಶಿವಪ್ಪ,ಯರ‌್ರಪ್ಪ, ಅಶ್ವತ್ಥ್‌ಪ್ಪ, ಕೃಷಿ ವಿಜ್ಞಾನ ಕೇಂದ್ರದ ನಾಗರಾಜು, ಚಂದ್ರಶೇಖರ್, ಅಮರೇಶ್ ಮತ್ತಿತರರು ಹಾಜರಿದ್ದರು.

Post Comments (+)