ಸೋಮವಾರ, ಜೂನ್ 14, 2021
24 °C

ಬೇಸಿಗೆ ಕ್ರೀಡಾ ಶಿಬಿರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕ್ರೀಡಾ ಸಂಸ್ಥೆಗಳು/ಕ್ಲಬ್‌ಗಳ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕ್ರೀಡಾ ತರಬೇತಿ ಶಿಬಿರಗಳ ವಿವರಗಳು ಇಂತಿವೆ.

ಕ್ರಿಕೆಟ್: ಹೆರಾನ್ಸ್ ಕ್ರಿಕೆಟ್ ಕ್ಲಬ್ ಮತ್ತು ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆ ಸಂಯುಕ್ತ ಆಶ್ರಯದಲ್ಲಿ ಹನ್ನೊಂದನೇ ವಾರ್ಷಿಕ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏಪ್ರಿಲ್ 4 ರಿಂದ ಮೇ 25ರ ವರೆಗೆ ಎನ್.ಆರ್. ಕಾಲೋನಿ ಎ.ಪಿ.ಎಸ್. ಶಾಲಾ ಮೈದಾನದಲ್ಲಿ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಹೆಚ್ಚಿನ ವಿವರಗಳಿಗೆ ಕೆ. ಮುರಳೀಧರ, ವ್ಯವಸ್ಥಾಪಕ ಕಾರ್ಯದರ್ಶಿ (ಮೊಬೈಲ್: 9845096056) ಅಥವಾ ಪ್ಲಾನೆಟ್    ಸ್ಪೋರ್ಟ್ಸ್ (9845374453), ಬಾನುಸಿಂಹ (ದೂರವಾಣಿ : 180042542535) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಕ್ರಿಕೆಟ್: ಬೆಂಗಳೂರು ಕ್ರಿಕೆಟರ್ಸ್‌ ಆಶ್ರಯದಲ್ಲಿ 21ನೇ ವಾರ್ಷಿಕ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏಪ್ರಿಲ್ 1 ರಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಆರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ಸ್ಪೋರ್ಟ್ಸ್ ಎನ್ ಸ್ಟೈಲ್, ಉತ್ತರಾಧಿ ಮಠ ರಸ್ತೆ, ನ್ಯಾಷನಲ್ ಕಾಲೇಜ್ ಮೈದಾನ ರಸ್ತೆ, ಬಸವನಗುಡಿ, ಬೆಂಗಳೂರು (ದೂರವಾಣಿ ಸಂಖ್ಯೆ: 080-26672227/ಶ್ರೀನಿವಾಸ ಮಂಡಿ: ಮೊಬೈಲ್ ನಂಬರ್: 9845268629/ವೆಂಕಟೇಶ್: 9845222226/9741777688/9901699225) ಅಥವಾ ವರ್ಡ್ ಸ್ಪೋರ್ಟ್ಸ್, ನಂಬರ್ 85, ಪಿ.ಇ.ಎಸ್. ಕಾಲೇಜ್ ರಸ್ತೆ, ಬ್ಯಾಂಕ್ ಕಾಲೋನಿ, ಬಿಎಸ್‌ಕೆ ಮೊದಲ ಹಂತ, ಬೆಂಗಳೂರು (ದೂರವಾಣಿ: 080-26918211).

ಕ್ರಿಕೆಟ್: ಬೆಂಗಳೂರು ಯೂತ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ 6 ರಿಂದ 18 ವರ್ಷ ವಯಸ್ಸಿನೊಳಗಿನವರ ಬಾಲಕರಿಗಾಗಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಎನ್‌ಆರ್‌ಎ ಮೈದಾನದಲ್ಲಿ ಏಪ್ರಿಲ್ 2 ರಿಂದ ಮೇ 18ರ ವರೆಗೆ ನಡೆಯಲಿದೆ. ಪ್ರಸ್ತುತ ಹೈದರಾಬಾದ್ ರಣಜಿ ತಂಡದ ತರಬೇತಿದಾರರಾಗಿರುವ ಮಾಜಿ ಅಂತರರಾಷ್ಟ್ರೀಯ ಆಟಗಾರ ಸುನಿಲ್ ಜೋಶಿ ಅವರು ಶಿಬಿರದ ಮೇಲ್ವಿಚಾರಕರಾಗಿರುತ್ತಾರೆ. ವಿವರಕ್ಕೆ ಸುಪ್ರೀತ್ ರಾಜು (9742121516) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಕ್ರಿಕೆಟ್: ಎಫಿಶಿಯೆಂಟ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏಪ್ರಿಲ್ 1 ರಿಂದ ಮೇ 15ರ ವರೆಗೆ ಬಸವೇಶ್ವರನಗರ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿವರಗಳಿಗೆ ಬಿ. ಪುಟ್ಟರಾಜು (ಮೊಬೈಲ್: 9341326250) ಹಾಗೂ ರಾಜೇಶ್ ಪಟೇಲ್ (9845119494) ಇವರನ್ನು ಸಂಪರ್ಕಿಸಿ.

ಫುಟ್‌ಬಾಲ್: ಬಿವೈಎಫ್‌ಎಲ್ ಆಶ್ರಯದಲ್ಲಿ 4 ರಿಂದ 18 ವರ್ಷ ವಯಸ್ಸಿನೊಳಗಿನವರ ಬಾಲಕರಿಗಾಗಿ ಬೇಸಿಗೆ ಫುಟ್‌ಬಾಲ್ ತರಬೇತಿ ಶಿಬಿರ ನಗರದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರ ಏಪ್ರಿಲ್ 2 ರಿಂದ 30ರವರೆಗೆ  ನಡೆಯುತ್ತದೆ. ವಿವರಗಳಿಗೆ ಅಧಿಪ್ ಭಂಡಾರಿ (ಮೊಬೈಲ್ ನಂಬರ್: 9686098644) ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಈಜು: ಕನಕಪುರ ರಸ್ತೆ ಯಳಚೇನಹಳ್ಳಿ ಜ್ಯೋತಿ ಕೇಂದ್ರೀಯ ವಿದ್ಯಾಲಯ ಮತ್ತು ಸಿಂದ್ಯಾ ಈಜು ಕಲಿಕಾ ಕೇಂದ್ರ ಸಂಯುಕ್ತ ಆಶ್ರಯಲ್ಲಿ ಈಜು ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರ ಮಾರ್ಚ್ 29 ರಿಂದ ಏಪ್ರಿಲ್ 27ರ ವರೆಗೆ ಆನಂತರ ಮೇ 1 ರಿಂದ 29ರ ವರೆಗೆ ಎರಡನೇ ಹಂತದ ಶಿಬಿರ ಏರ್ಪಡಿಸಲಾಗಿದೆ. ಭಾಗವಹಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ: 65667662/ಮೊಬೈಲ್ ನಂಬರ್: 9880135178/9741523064 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಕ್ರಿಕೆಟ್: ಜೆ.ಪಿ. ಸ್ಕೂಲ್ ಆಫ್ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಏಪ್ರಿಲ್ 6ರಿಂದ ಜಯನಗರದ 5ನೇ ಬ್ಲಾಕ್‌ನಲ್ಲಿರುವ ಶಾಲಿನಿ ಕ್ರೀಡಾಂಗಣದಲ್ಲಿ 18ನೇ ವರ್ಷದ ಬೇಸಿಗೆ ಕ್ರಿಕೆಟ್ ಶಿಬಿರ ನಡೆಯಲಿದೆ.

ಕರ್ನಾಟಕದ ರಣಜಿ ತಂಡದ ಮಾಜಿ ನಾಯಕ ಹಾಗೂ ಐಸಿಸಿ ಅಂಪೈರ್ ಎ.ವಿ. ಜಯಪ್ರಕಾಶ್ ಅವರು ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಬಿ.ಎಸ್. ಸುರೇಶ್ 9845019344 ಹಾಗೂ ನರಸಿಂಹ 9844866887 ಅವರನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.