ಬೈಕ್‌ ಮೋಹಿ ಲಕ್ಷ್ಮಿ ರೈ

7

ಬೈಕ್‌ ಮೋಹಿ ಲಕ್ಷ್ಮಿ ರೈ

Published:
Updated:

 ಮಂಜಿನಲ್ಲಿ ಮಿಂದೆದ್ದು ಬಂದ ಹಿಮಕನ್ನಿಕೆಯಂತಿರುವ ನಟಿ ಲಕ್ಷ್ಮಿ ರೈ ತಮ್ಮ ಅನುರೂಪ ಚೆಲುವಿನಿಂದಲೇ ಸಿನಿಪ್ರಿಯರ ಮನಸ್ಸು ಕದ್ದವರು. ಅಂದದ ಜತೆಗೆ ಚೆಂದದ ಅಭಿನಯದಿಂದಲೂ ಮನೆಮಾತಾದ ಈಕೆ ದಕ್ಷಣ ಭಾರತದ ಎಲ್ಲ ಚಿತ್ರಗಳಲ್ಲೂ ನಟಿಸಿದ್ದಾರೆ. ಮೊದಲ ನೋಟಕ್ಕೆ ಪಕ್ಕಾ ದೇಸಿ ಹುಡುಗಿಯಂತೆ ಕಾಣಿಸುವ ಲಕ್ಷ್ಮಿಗೆ ಮೊದಲಿನಿಂದಲೂ ಬೈಕ್‌ಗಳೆಂದರೆ ವಿಪರೀತ ಕ್ರೇಜ್‌.

ಕಾಲೇಜು ಓದುವಾಗ ಆಕೆ ಬೈಕ್‌ ರೈಡಿಂಗ್‌ ಮಾಡುತ್ತಾ ಖುಷಿ ಪಡುತ್ತಿದ್ದರಂತೆ. ಲಕ್ಷ್ಮಿ ರೈ ತಮ್ಮ ಬೈಕ್‌ ಮೋಹವನ್ನು ನೆನೆದು ಈಗಲೂ ಖುಷಿ ಪಡುತ್ತಾರಂತೆ. ಅಂದಹಾಗೆ, ತಮಿಳಿನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ಇರುಂಬು ಕುದಿರೈ’ ಸಿನಿಮಾದಲ್ಲಿ ಲಕ್ಷ್ಮಿ ರೈ ಬೈಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೈಕ್‌ ಮೋಹಿ ಲಕ್ಷ್ಮಿಗೆ ಬೈಕರ್ ಪಾತ್ರವೇ ಸಿಕ್ಕಿರುವುದರಿಂದ ಆಕೆಗೆ ಈಗ ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ. ‘ಮೊದಲಿನಿಂದಲೂ ನನಗೆ ಬೈಕ್‌ಗಳೆಂದರೆ ಪಂಚಪ್ರಾಣ. ಕಾಲೇಜು ದಿನಗಳಲ್ಲಿ ನಾನು ಸಹ ಬೈಕರ್‌ ಆಗಿದ್ದೆ. ನಿತ್ಯ ಕಾಲೇಜಿಗೆ ಬೈಕ್‌ನಲ್ಲಿ ಹೋಗುವುದು ತುಂಬ ಖುಷಿ ಎನಿಸುತ್ತಿತ್ತು. ನನ್ನ ಬೈಕ್‌ ಪ್ರೀತಿಗೆ ತುಸು ತಡೆಯೊಡ್ಡಿದ್ದು ಒಂದು ಸಣ್ಣ ಅಪಘಾತ. ಬೈಕ್‌ನಲ್ಲಿ ಬಿದ್ದು ಗಾಯಮಾಡಿಕೊಂಡ ನಂತರ ಕೆಲ ದಿನದ ಮಟ್ಟಿಗೆ ಬೈಕ್‌ ಮೋಹವನ್ನು ಬಿಟ್ಟು ಬಿಟ್ಟಿದ್ದೆ.

ಆದರೆ, ಅದೃಷ್ಟವೆಂಬಂತೆ ನನ್ನ ಹವ್ಯಾಸವನ್ನು ಪೊರೆಯುವ ಅವಕಾಶವೊಂದು ಈಗ ಸಿಕ್ಕಿದೆ. ‘ಇರುಂಬು ಕುದಿರೈ’ ಚಿತ್ರದಲ್ಲಿ ಬೈಕರ್‌ ಪಾತ್ರ ನಿರ್ವಹಿಸುವುದರ ಮೂಲಕ ನನ್ನ ಬೈಕ್‌ ಮೋಹಕ್ಕೆ ಮತ್ತೆ ಜೀವ ಬಂದಿದೆ’ ಎಂದು ತಮ್ಮ ಬೈಕ್ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ಲಕ್ಷ್ಮಿ. ಈ ಆ್ಯಕ್ಷನ್‌ ಸಿನಿಮಾವನ್ನು ಯುವರಾಜ್‌ ನಿರ್ದೇಶಿಸುತ್ತಿದ್ದು, ಎಜಿಎಸ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ಲಕ್ಷ್ಮಿ ರೈ ಜತೆಗೆ ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ.‘ಇರಂಬು ಕುದಿರೈ’ ಚಿತ್ರದಲ್ಲಿ ನಾನು ಸೂಪರ್‌ ಬೈಕ್‌ಗಳನ್ನು ಓಡಿಸುತ್ತೇನೆ. ಇಂಥದ್ದೊಂದು ರೋಚಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ನನಗಂತೂ ತುಂಬ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಲಕ್ಷ್ಮಿ ರೈ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry