ಗುರುವಾರ , ನವೆಂಬರ್ 21, 2019
20 °C
`ಬಾಲಾಪರಾಧಿ'ಯಿಂದ ಪೊಲೀಸರಿಗೆ ಚಳ್ಳೆಹಣ್ಣು; ಬೆನ್ನುಬಿದ್ದ ಚೀತಾ, ಚಾಲುಕ್ಯ ವಾಹನ

ಬೈಕ್ ಕದ್ದು `ಜಾಲಿರೈಡ್'; ಬಾಲಕಿ ಅತ್ಯಾಚಾರ ಆರೋಪ!

Published:
Updated:

ಹುಬ್ಬಳ್ಳಿ:`ಆತ ಹದಿನೈದರ ಹರೆಯದ ಬಾಲಾಪರಾಧಿ. ಶೋಕಿಗಾಗಿ ಬೈಕ್ ಕದ್ದು, `ಜಾಲಿ ರೈಡ್' ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ. ಬಾಲಾಪರಾಧ ನ್ಯಾಯಮಂಡಳಿ ಸೇರಿದ್ದ, ಆತ ಹೊರಬರುತ್ತಿದ್ದಂತೆ ಮತ್ತದೇ ಚಾಳಿ ಮುಂದುವರಿಸಿದ್ದಾನೆ!ಅಷ್ಟೇ ಅ್ಲ್ಲಲ, ಇದೀಗ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೆಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತ್ದ್ದಿದಾನೆ. ಜೊತೆಗೆ ಈ ಹಿಂದೆಯೂ ನಾಲ್ಕರ ಹರೆಯದ ಇಬ್ಬರು ಬಾಲಕಿಯರನ್ನು ಅತ್ಯಾಚಾರ ನಡೆಸಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದ್ದು, ಆ ಮೂಲಕ ಅವಳಿನಗರ ಪೊಲೀಸರ ನ್ದ್ದಿದೆಗೆಡಿಸಿದ್ದಾನೆ!!ವಿಪರ್ಯಾಸವೆಂದರೆ, ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್‌ನ ಅಪರಾಧ ವಿಭಾಗದ ಎಲ್ಲ ಪೊಲೀಸರು ಸದ್ದಿಲ್ಲದೆ ಈ ಬಾಲಪರಾಧಿಯ ಬೆನ್ನು ಬಿದ್ದಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಧೋಬಿಘಾಟ್ ಮತ್ತು ವಿದ್ಯಾನಗರ ಠಾಣೆಯ ಬಿವಿಬಿ ಎಂಜಿನಿ ಯರಿಂಗ್ ಕಾಲೇಜು ಬಳಿ ಭಾನುವಾರ ಆತ ಎರಡು ಬಾರಿ ಗಸ್ತು ಪೊಲೀಸರ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ.ತಕ್ಷಣ ಆ ಸಂದೇಶ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಬಿತ್ತರವಾ ಗುತ್ತಿದ್ದಂತೆ ಚೀತಾ, ಚಾಲುಕ್ಯ ವಾಹನಗಳು ಆತನನ್ನು ಬೆನ್ನಟ್ಟಿ ಹೋಗಿವೆ. ಎ್ಲ್ಲಲೆಡೆ ನಾಕಾಬಂದಿ ಹಾಕಲಾಗಿತ್ತು. ಆದರೆ, ಇನ್ನೇನು ಸಿಕ್ಕಿಬಿದ್ದ ಎನ್ನುವಷ್ಟರಲ್ಲಿ ಆತ ಬೈಕ್ ಬಿಟ್ಟು ಪರಾರಿ ಯಾಗಿದ್ದಾನೆ!ಇದೀಗ ದೇಶಪಾಂಡೆ ನಗರದಲ್ಲಿರುವ ಬಾಲಕನ ಮನೆಯ ಮುಂಭಾಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆತ ಮರದ ಮೇಲೆ, ಪಾಳುಮನೆ, ರೈಲ್ವೆ ಹಳಿ ಸಮೀಪ ಹಗಲು ವೇಳೆ ವಿಶ್ರಾಂತಿ ಪಡೆಯುತ್ತಿದ್ದಾನೆ ಎನ್ನಲಾಗಿದ್ದು, ರಾತ್ರಿ ವೇಳೆ ಮನೆಗೆ ಬರಬಹುದೆಂಬ ನಿರೀಕ್ಷೆ ಪೊಲೀಸರದ್ದು. ಚುನಾವಣೆ ಕರ್ತವ್ಯದ ಒತ್ತಡದ ಮಧ್ಯೆ, ಆತ ನಗರ ಪೊಲೀಸರ ನಿದ್ದೆಗೆಡಿಸಿದ್ದಾನೆ.ಹಿನ್ನೆಲೆ: ಕಳೆದ ಆರು ತಿಂಗಳಲ್ಲಿ 60ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ನಿರ್ದೇಶನದಂತೆ ಇಲ್ಲಿನ ಉಪನಗರ ಪೊಲೀಸರು ತೀವ್ರ ತನಿಖೆ ನಡೆಸಿದ್ದರು.ಬೆಳಗ್ಗಿನ ಜಾವ ಬೈಕ್‌ನಲ್ಲಿ ಅತಿವೇಗದಿಂದ ಹೋಗುತ್ತಿದ್ದ ಬಾಲಕನನ್ನು ಬೈಕ್ ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ಆತ ತಪ್ಪಿಸಿಕೊಂಡಿದ್ದ. ತಕ್ಷಣ ಬೆನ್ನುಬಿದ್ದ ಪೊಲೀಸರು ನಾಕಾಬಂದಿ ಹಾಕಿ ಬೈಕ್ ಸಹಿತ ಬಾಲಕನನ್ನು ಬಂಧಿಸಿದಾಗ `ಜಾಲಿ ರೈಡ್' ಹುಚ್ಚಿನಿಂದ ಬೈಕ್ ಕದ್ದು, ಪೆಟ್ರೋಲ್ ಮುಗಿಯುವರೆಗೆ ಓಡಿಸಿ, ನಂತರ ಅಲ್ಲೇ ಬಿಟ್ಟು ಇನ್ನೊಂದು ಬೈಕ್ ಕದಿಯುತ್ತಿದ್ದ ಈ ಬಾಲಕ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಆರು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ ಸಂಗತಿ ಬೆಳಕಿಗೆ ಬಂದಿತ್ತು.ಆತ ವಿವಿಧೆಡೆಯಿಂದ ಕದ್ದು ಅಲ್ಲಲ್ಲಿ ಬಿಟ್ಟು ಹೋದ 18 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ಬಾಲಾಪರಾಧಿ ಕಾರಣಕ್ಕೆ ಧಾರವಾಡ ದಲ್ಲಿರುವ ಬಾಲಾಪರಾಧ ನ್ಯಾಯಮಂಡಳಿಗೆ ಕಳುಹಿಸಿದ್ದರು.ಬಾಲಕನ್ನು ಬಂಧಿಸಿದ ಪೊಲೀಸರ ಸಾಹಸಕ್ಕೆ ನಗದು ಬಹುಮಾನವನ್ನೂ ನೀಡಿದ್ದರು. ಬಾಲಾಪರಾಧ ನ್ಯಾಯ ಮಂಡಳಿ ಸೇರಿದ್ದ ಆತ ಅಲ್ಲಿಂದ ಹೊರಬಂದು ನಾಲ್ಕು ದಿನವೂ ಕಳೆದಿಲ್ಲ. ಅಷ್ಟರಲ್ಲೇ ಮತ್ತೆ ಎರಡು ಬೈಕ್ ಅಪಹರಿಸಿದ, ನಗರದ ಶಿವಗಂಗಾ ಲೇಔಟ್‌ನಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಆಮಿಷ ಒಡ್ಡಿ, ಬೈಕ್‌ನಲ್ಲಿ ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾನೆ.ಬಾಲಕಿಯ ತಂದೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯ ಮತ್ತು ಬಾಲಕನ ಚಹರೆಯ ಆಧಾರದಲ್ಲಿ ತನಿಖೆ ನಡೆಸಿರುವ ಪೊಲೀಸರು ಈ ಬಾಲಾಪರಾಧಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಖಚಿತಪಡಿಸಿದ್ದಾರೆ.ಬೈಕ್ ಕದ್ದು ಶರವೇಗದಲ್ಲಿ ಪರಾರಿಯಾಗುವ, ಜೊತೆಗೆ ಅತ್ಯಾಚಾರ ಆರೋಪಿಯಾಗಿರುವ ಈ ಬಾಲಕನ್ನು ಮತ್ತೆ ಬಂಧಿಸಿದರೆ ವಿಶೇಷ ಬಹುಮಾನ ನೀಡುವುದಾಗಿ ಪೊಲೀಸ್ ಕಮಿಷನರ್ ಘೋಷಿಸಿದ್ದಾರೆ!

ಪ್ರತಿಕ್ರಿಯಿಸಿ (+)