ಬೈಪಾಸ್ ನಿರ್ಮಾಣಕ್ಕೆ ರೈತರ ವಿರೋಧ

7

ಬೈಪಾಸ್ ನಿರ್ಮಾಣಕ್ಕೆ ರೈತರ ವಿರೋಧ

Published:
Updated:

ಗೌರಿಬಿದನೂರು: ಅಭಿವೃದ್ಧಿ, ಯೋಜನೆಗಳ ಅನುಷ್ಠಾನ ಮುಂತಾ ದವುಗಳ ನೆಪದಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ, ರೈತರ ದೈನಂದಿನ ಜೀವ ನವೇ ನಶಿಸಲಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ.ಆರ್.ಲಕ್ಷ್ಮೀ ನಾರಾಯಣ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಟ್ಟಣದ ಹೊರವಲಯದ ಗುಂಡಾಪುರ ಗ್ರಾಮದಿಂದ ಹಿರೇ ಬಿದನೂರು ಗ್ರಾಮದವರೆಗೆ  ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ ವತಿ ಯಿಂದ  ಬೈಪಾಸ್ ರಸ್ತೆ ನಿರ್ಮಿಸುವು ದಕ್ಕೆ ನಮ್ಮ ವಿರೋಧವಿದೆ~ ಎಂದರು.`ಸಿರಾದಿಂದ ಮಧುಗಿರಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಮಾರ್ಗವಾಗಿ ಮುಳುಬಾಗಿಲುವರೆಗೂ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ಫೆ.17ರಂದು ಸಭೆ ನಡೆದಿರುವುದು ಯಾರಿಗೂ ಮಾಹಿತಿಯಿಲ್ಲ.  ಹಾಲಿ ರಸ್ತೆಯ ಮಧ್ಯದಿಂದ ಎರಡೂ ಕಡೆ 40 ಮೀಟರ್ ರಸ್ತೆ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರದ ಆದೇಶವಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಇದು ಖಂಡನೀಯ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಎಲ್.ಅಶ್ವತ್ಥನಾರಾಯಣ ಮಾತ ನಾಡಿ, `ರೈತರು  ತಮ್ಮ ಜಮೀನು ಗಳನ್ನು ಸ್ವಾಧೀನ ಪಡಿಸಿಕೊಂಡು ಬೈಪಾಸ್ ರಸ್ತೆ ನಿರ್ಮಿಸಲು ಅವಕಾಶ ಕೊಡುವುದಿಲ್ಲ.ರೈತರ ಜಮೀನುಗಳನ್ನು ಸ್ವಾಧೀಪಡಿಸಿಕೊಳ್ಳಲು ಮುಂದಾದಲ್ಲಿ, ತೀವ್ರ ಸ್ವರೂಪದ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ  ಅಧ್ಯಕ್ಷ ಬಷೀರ್, ರೈತರಾದ ನರಸಿಂಹಯ್ಯ, ಗಂಗಾಧರ, ತಿಮ್ಮಯ್ಯ, ನಾರಾಯಣಸ್ವಾಮಿ, ರಂಗಯ್ಯ, ಎಂ.ಟಿ .ಹನುಮಂತರಾಯಪ್ಪ, ಗಂಗಯ್ಯ, ಗೋಪಿ, ರಾಮಕೃಷ್ಣಾರೆಡ್ಡಿ  ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry