ಶನಿವಾರ, ಜೂನ್ 19, 2021
28 °C

ಬೈಪಾಸ್ ರಸ್ತೆ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮೈಸೂರಿನಿಂದ ಮಂಗ ಳೂರು ನಡುವೆ ಸಂಚರಿಸುವ ವಾಹನಗಳಿಗೆ ಮಡಿಕೇರಿ ಮಧ್ಯಬಿಂದು ವಾಗಿದೆ. ಅದರಿಂದಾಗಿ ಇವೆರಡೂ ಕಡೆ ಸಂಚರಿಸುವ ಸಾಕಷ್ಟು ವಾಹನಗಳು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಂದು ಜಮಾಯಿಸುತ್ತವೆ. ಇದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.ಇದನ್ನು ತಪ್ಪಿಸುವುದಗೋಸ್ಕರ ಮೈಸೂರಿನಿಂದ ಮಂಗಳೂರು ಕಡೆ ತೆರಳಲು ಬೈಪಾಸ್ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಆರಂಭವಾಗಿರುವ ಈ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ನೀಡಿದರು.ಬೈಪಾಸ್ ರ್ಮಾಣವಾಗುವುದರಿಂದ ಮಂಗಳೂರು ಕಡೆ ಪ್ರಯಾಣ ಬೆಳೆಸುವುದು ಸುಲಭವಾಗಲಿದೆ. ಹೀಗಾಗಿ ಈ ವೃತ್ತದಲ್ಲಿ ಆಗುತ್ತಿದ್ದ ವಾಹನ ದಟ್ಟಣೆಯೂ ತಗ್ಗಿದಂತಾಗು ವುದು. ಇದು ಸ್ಥಳೀಯ ಜನರಿಗೆ ವಿಶೇಷವಾಗಿ ಈ ವೃತ್ತದ ಮೂಲಕ ಸಂಚರಿಸುವವರಿಗೆ ಅನುಕೂಲ ವಾಗಲಿದೆ ಎಂದು ಅವರು ಹೇಳಿದರು.ಸುಮಾರು 20 ಲಕ್ಷ ರೂಪಾಯಿ ವೆಚ್ಚದ ಈ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳುವ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು. ಮಡಿ ಕೇರಿ-ಸಂಪಾಜೆ ರಸ್ತೆ ಕಾಮಗಾರಿ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿ ರುವ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಹಣವನ್ನು ಶೀಘ್ರದಲ್ಲಿಯೇ ಮಂಜೂರು ಮಾಡಲಾಗುವುದು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.