ಶುಕ್ರವಾರ, ಮೇ 14, 2021
29 °C

ಬೈರಾಗಿಗಳು ಬುಡ್ಗಜಂಗಮರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬೈರಾಗಿ/ ಸನ್ಯಾಸ/ಜಂಗಾಲ ಸಮುದಾಯವನ್ನು ಬುಡ್ಗಜಂಗಮ ಎಂದು ಪರಿಗಣಿಸಬಾರದು ಹಾಗೂ ಜಾತಿ ಪ್ರಮಾಣಪತ್ರವನ್ನೂ ನೀಡಬಾರದು ಎಂದು ಆಗ್ರಹಿಸಿ ಮುಳಬಾಗಲು ತಾಲ್ಲೂಕಿನ ಪರಿಶಿಷ್ಟ ಜಾತಿ, ವರ್ಗಗಳ ಪ್ರಮುಖರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.ತಮ್ಮನ್ನು ಬುಡ್ಗಜಂಗಮ ಎಂದು ಪರಿಗಣಿಸಬೇಕು ಎಂದು ಕೋರಿ ಬೈರಾಗಿ/ಸನ್ಯಾಸ/ಜಂಗಾಲ ಸಮುದಾಯದವರು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪರಿಶಿಷ್ಟರಿಗೆ ದೊರಕುವ ಸೌಲಭ್ಯಗಳನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.     ಮುಳಬಾಗಲು ತಹಶೀಲ್ದಾರರು ಮಹಜರ್ ಮಾಡಿ ತಾಲ್ಲೂಕಿನಲ್ಲಿ ಬುಡ್ಗಜಂಗಮರು ಇಲ್ಲ ಎಂದು ವರದಿ ನೀಡಿರುತ್ತಾರೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯು ಜಿಲ್ಲೆಯಲ್ಲಿ ಬುಡ್ಗಜಂಗಮರು ಇಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಆದರೂ ತಮ್ಮನ್ನು ಬುಡ್ಗಜಂಗಮರೆಂದು ಪರಿಗಣಿಸಲು ಬೈರಾಗಿ ಸಮುದಾಯದವರು ಮನವಿ ಸಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವೆಂಕಟರಮಣ, ಎಂ.ಎಲ್.ಅಮರನಾಥ್, ಜಯರಾಂ, ಕೆಂಪಣ್ಣ, ನಾರಾಯಣಸ್ವಾಮಿ, ಕೆ.ವೆಂಕಟಾಚಲಪತಿ,  ಎನ್.ವಿಜಯಕುಮಾರ್, ಜಿ.ನಾರಾಯಣಸ್ವಾಮಿ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.