ಬೊಂಬಟ್ ಬಾಲಿವುಡ್

7

ಬೊಂಬಟ್ ಬಾಲಿವುಡ್

Published:
Updated:
ಬೊಂಬಟ್ ಬಾಲಿವುಡ್

ಶ್ರೀದೇವಿಯ `ಇಂಗ್ಲಿಷ್ ವಿಂಗ್ಲಿಷ್~

ಹದಿನೈದು ವರ್ಷಗಳ ನಂತರ ಶ್ರೀದೇವಿ ಬಣ್ಣ ಹಚ್ಚುತ್ತಿರುವುದು ಗೊತ್ತೇ ಇದೆ. ಆ ಚಿತ್ರದ ಹೆಸರು `ಇಂಗ್ಲಿಷ್ ವಿಂಗ್ಲಿಷ್~. ಇದೀಗ ಚಿತ್ರೀಕರಣ ಆರಂಭವಾಗಿದೆ. ಅದರಲ್ಲಿ ಶ್ರೀದೇವಿಗೆ ಇಂಗ್ಲಿಷ್ ಮಾತನಾಡಲು ತಡವರಿಸುವ ಮಹಿಳೆಯ ಪಾತ್ರ.

 

`ಜುದಾಯಿ~ ಚಿತ್ರದಲ್ಲಿ ಮಧ್ಯಮ ವರ್ಗದ ಹೆಣ್ಣುಮಗಳಾಗಿ ಮನೋಜ್ಞ ಅಭಿನಯ ನೀಡಿದ್ದಶ್ರೀದೇವಿಯೇ ಭಾರತೀಯ ಮಧ್ಯಮ ವರ್ಗ ಎದುರಿಸುತ್ತಿರುವ ಇಂಗ್ಲಿಷ್ ಸಮಸ್ಯೆಯನ್ನು ಪ್ರತಿನಿಧಿಸಲು ಸೂಕ್ತ ನಟಿ ಎನಿಸಿದ ಕಾರಣ ನಿರ್ಮಾಪಕ ಬಾಲ್ಕಿ ಅವರನ್ನು ಆಯ್ಕೆ ಮಾಡಿದರಂತೆ.ಹಿರಿಯ ನಿರ್ದೇಶಕ ಬಾಲ್ಕಿ ಅವರ ಪತ್ನಿ ಗೌರಿ ಶಿಂಧೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಬಾಲ್ಕಿಯವರದೇ ಕತೆ ಆಧರಿಸಿದ ಸಿನಿಮಾ. `ಇಂಗ್ಲಿಷ್ ಮಾತನಾಡುವುದೇ ದೊಡ್ಡಸ್ತಿಕೆ ಎಂದುಕೊಂಡಿರುವ ಭಾರತೀಯರಿಗೆ ಅದು ಒಂದು ಕೇವಲ ಭಾಷೆ, ಅದಕ್ಕಿಂತ ದೊಡ್ಡದು ಜ್ಞಾನ ಎಂಬುದನ್ನು ಹೇಳುವ ಉದ್ದೇಶ ತಮ್ಮ ಚಿತ್ರದ್ದು~ ಎಂದಿದ್ದಾರೆ ಅವರು.ಸಾಮಾನ್ಯ ಹಿನ್ನೆಲೆಯಿಂದ ಬಂದ ತಮಗೆ ಸಾಮಾನ್ಯ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರಗಳೆಂದರೆ ಬಲು ಇಷ್ಟ ಎಂದು ಹೇಳಿಕೊಂಡಿರುವ ಶ್ರೀದೇವಿ ಚಿತ್ರೀಕರಣದಲ್ಲಿ ಮುಂಚಿನ ಶ್ರದ್ಧೆಯಿಂದಲೇ ನಿರತರಾಗಿದ್ದಾರೆ.

`ಔರಂಗಜೇಬ್~ ಪೃಥ್ವಿರಾಜ್

ಮೊದಲ ಬಾಲಿವುಡ್ ಚಿತ್ರ ಬಿಡುಗಡೆಯಾಗುವ ಮುಂಚೆಯೇ ಮಲಯಾಳಂ ನಟ ಪೃಥ್ವಿರಾಜ್ ಮತ್ತೊಂದು ಹಿಂದಿ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಅದು ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಅವರ ನಿರ್ಮಾಣದ್ದು. ಚಿತ್ರದ ಹೆಸರು `ಔರಂಗಜೇಬ್~. ಇದರಲ್ಲಿ ಪೃಥ್ವಿರಾಜ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಅತುಲ್ ಸಬರ್‌ವಾಲಾ ನಿರ್ದೇಶಕರು.ಪೃಥ್ವಿರಾಜ್ ನಟಿಸಿದ ಮೊದಲ ಹಿಂದಿ ಸಿನಿಮಾ `ಅಯ್ಯಾ~ ಚಿತ್ರೀಕರಣ ಪೂರೈಸಿದೆ. ಅದರ ನಾಯಕಿ ರಾಣಿ ಮುಖರ್ಜಿ. ನಿರ್ದೇಶಕ ಸಚಿನ್ ಕುಂದಲ್ಕರ್. `ಅಯ್ಯಾ~ ಚಿತ್ರೀಕರಣ ಸಮಯದಲ್ಲಿ ಪೃಥ್ವಿರಾಜ್ ಅವರ ಪ್ರತಿಭೆಗೆ ಮನಸೋತ ರಾಣಿ ಮುಖರ್ಜಿ, ಆದಿತ್ಯಾ ಚೋಪ್ರಾ ಅವರಿಗೆ ಶಿಫಾರಸು ಮಾಡಿ `ಔರಂಗಜೇಬ್~ನಲ್ಲಿ ಅವಕಾಶ ಕೊಡಿಸಿದ್ದಾರಂತೆ.

ಫರಾನ್-ವಿದ್ಯಾ ಜೋಡಿ

`ಶಾದಿ ಕೆ ಸೈಡ್ ಎಫೆಕ್ಟ್~ ಚಿತ್ರದಲ್ಲಿ ವಿದ್ಯಾ ಬಾಲನ್ ಮತ್ತು ಫರಾನ್ ಅಖ್ತರ್ ಜೋಡಿಯಾಗುತ್ತಿದ್ದಾರೆ. ಇದು 2006ರಲ್ಲಿ ಬಿಡುಗಡೆಯಾಗಿದ್ದ `ಪ್ಯಾರ್ ಕ ಸೈಡ್ ಎಫೆಕ್ಟ್~ ಸಿನಿಮಾದ ಸರಣಿ ಚಿತ್ರ. ಪ್ರಿತೀಶ್ ನಂದಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮೂಲ ಚಿತ್ರದ ನಿರ್ದೇಶಕ ಸಕೇತ್ ಚೌಧರಿ ನಿರ್ದೇಶಿಸುತ್ತಿದ್ದಾರೆ. ಮೂಲ ಚಿತ್ರದಲ್ಲಿ ರಾಹುಲ್ ಬೋಸ್ ಮತ್ತು ಮಲ್ಲಿಕಾ ಶೆರಾವತ್ ನಟಿಸಿದ್ದರು.`ವಿದ್ಯಾ ಮತ್ತು ಫರಾನ್ ಅವರದು ತಾಜಾ ಜೋಡಿ. ಅವರಿಬ್ಬರು ಪ್ರತಿಭಾವಂತರು ಕೂಡ. ಈ ಜೋಡಿ ಗೆಲ್ಲುವುದು ಖಂಡಿತ~ ಎಂದು ಹೇಳಿರುವ ನಿರ್ದೇಶಕರು, ತಮ್ಮ ಚಿತ್ರದ ನಾಯಕ-ನಾಯಕಿಗೆ ಮದುವೆಯಾದ ನಂತರ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಎಂಬುದನ್ನು ವಿಶ್ಲೇಷಣಾತ್ಮಕವಾಗಿ ತೋರಿಸಲಿದ್ದಾರಂತೆ.

 

ಶ್ರದ್ಧಾ ಕಪೂರ್ ಪ್ರವೇಶ

ಯಾರೀ ಶ್ರದ್ಧಾ ಕಪೂರ್ ಎಂದಿರಾ? ಹಾಸ್ಯ ನಟ ಶಕ್ತಿ ಕಪೂರ್ ಮಗಳು. ಮಹೇಶ್ ಭಟ್ ಅವರ `ಆಶಿಕಿ~ ಚಿತ್ರದ ಸರಣಿ `ಆಶಿಕಿ-2~ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಆದಿತ್ಯ ರಾಯ್ ಕಪೂರ್ ನಾಯಕ. ರಾಹುಲ್ ರಾಯ್, ಅನು ಅಗರ್‌ವಾಲ್ `ಆಶಿಕಿ~ ಚಿತ್ರದಲ್ಲಿ ನಿರ್ವಹಿಸಿದ್ದ ಪಾತ್ರವನ್ನು ಈ ಹೊಸ ಮುಖಗಳು ಮಾಡಲಿದ್ದಾರೆ.

 

`ಚಿತ್ರಕ್ಕೆ ಹೊಸಬರ ಅವಶ್ಯಕತೆ ಇತ್ತು. ಯಾಕೆಂದರೆ ನಮ್ಮ ಪಾತ್ರಗಳಿಗೆ ತಕ್ಕಂತೆ ಅವರನ್ನು ತಿದ್ದಬೇಕಿತ್ತು. ಅದರಿಂದ ಇವರನ್ನು ಆಯ್ಕೆ ಮಾಡಲಾಗಿದೆ~ ಎಂದು ನಿರ್ಮಾಪಕರಾದ ಮಹೇಶ್ ಭಟ್ ಮತ್ತು ಮುಕೇಶ್ ಭಟ್ ಹೇಳಿಕೊಂಡಿದ್ದಾರೆ. ಮೋಹಿತ್ ಸೂರಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶಾದ್ ರಂಧಾವಾ ಕೂಡ ನಟಿಸುತ್ತಿದ್ದಾರೆ. ಹಳೆಯ `ಆಶಿಕಿ~ಯಲ್ಲಿ ದೀಪಕ್ ತಿಜೋರಿ ನಟಿಸಿದ್ದ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry