ಬೊಂಬಾಟ್ ಬಾಲಿವುಡ್ : ನಿರ್ದೇಶಕರ ನಟಿ ಪರಿಣೀತಿ

7

ಬೊಂಬಾಟ್ ಬಾಲಿವುಡ್ : ನಿರ್ದೇಶಕರ ನಟಿ ಪರಿಣೀತಿ

Published:
Updated:
ಬೊಂಬಾಟ್ ಬಾಲಿವುಡ್ : ನಿರ್ದೇಶಕರ ನಟಿ ಪರಿಣೀತಿ

ಯಶ್‌ರಾಜ್ ಬ್ಯಾನರ್‌ನ `ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ಮೂಲಕ ಬಾಲಿವುಡ್‌ಗೆ ಅಡಿ ಇಟ್ಟ ಪರಿಣೀತಿ ಚೋಪ್ರಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ತಾನು ಬಿಕಿನಿ ತೊಡಲು ಸಿದ್ಧ ಎಂದು ಹೇಳಿ ಸುದ್ದಿ ಮಾಡಿದ್ದಾಳೆ. `ನಾನು ನಿರ್ದೇಶಕರ ನಟಿ. ಸ್ಕ್ರಿಪ್ಟ್ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನಾನು ಬಿಕಿನಿ ಹಾಕಲು ಸಿದ್ಧ ಜೊತೆಗೆ ಎಂಥದೇ ದೃಶ್ಯಗಳನ್ನು ನಿರ್ವಹಿಸಲು ಸಿದ್ಧ~ ಎಂದಿದ್ದಾಳೆ.`ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ನಟನೆಗೆ ಫಿಲಂಫೇರ್ ಅತ್ಯುತ್ತಮ ಚೊಚ್ಚಿಲ ನಟಿ ಪ್ರಶಸ್ತಿ ಪಡೆದು ಬೀಗುತ್ತಿರುವ ಪರಿಣೀತಿ ಆ ಚಿತ್ರದಲ್ಲಿ ಅವಕಾಶ ಪಡೆಯಲು 85 ಕೆಜಿ ಇದ್ದ ತನ್ನ ದೇಹತೂಕವನ್ನು ಇಳಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಗೆಳೆಯ ಮತ್ತು `ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ನಿರ್ದೇಶಕ ಮನೀಶ್ ಶರ್ಮಾ ತಮ್ಮನ್ನು ಆದಿತ್ಯಾ ಚೋಪ್ರಾಗೆ ಪರಿಚಯಿಸಿ ಅವಕಾಶ ಕೊಡಿಸಿದ ದಿನಗಳ ನೆನಪಿಗೆ ಜಾರುವ ಆಕೆ, ಇದೀಗ ಯಶ್‌ರಾಜ್ ಬ್ಯಾನರ್‌ನ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾಳೆ.

 

`ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದಲ್ಲಿ ಅವಳಿಗೆ ಸಿಕ್ಕಿದ್ದು ಎರಡನೇ ನಾಯಕಿ ಪಾತ್ರ. ಇದೀಗ `ಇಷ್ಕಯಾದೆ~ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗುವ ಅವಕಾಶ ಸಿಕ್ಕಿದೆ.

 

ಕತ್ರೀನಾ ಜಾಗಕ್ಕೆ ದೀಪಿಕಾ

ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ನಾಯಕರಾಗಿರುವ `ಕೊಚಾಡಿಯನ್~ ಚಿತ್ರಕ್ಕೆ ಕತ್ರೀನಾ ಕೈಫ್ ನಾಯಕಿಯಾಗಿ ಆಯ್ಕೆಯಾದ ಸುದ್ದಿ ಬಂದಿತ್ತು. ಇದೀಗ ಚಿತ್ರದ ನಿರ್ದೇಶಕಿ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ಚಿತ್ರದ ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.

 

ಇದು ಭಾರತದಲ್ಲಿ ಮೊದಲ ಬಾರಿಗೆ ತಯಾರಾಗುತ್ತಿರುವ ಪರ್ಫಾಮೆನ್ಸ್ ಕ್ಯಾಪ್ಚರಿಂಗ್ ತಂತ್ರಜ್ಞಾನ ಬಳಸಿದ ಥ್ರೀಡಿ ಸಿನಿಮಾ ಎನ್ನಲಾಗಿದೆ. ರಜನಿಕಾಂತ್‌ಗೆ ನಾಯಕಿಯಾಗಿ `ರಾಣಾ~ ಚಿತ್ರದಲ್ಲೂ ದೀಪಿಕಾ ನಟಿಸಿದ್ದಾಳೆ. `ರಾಣಾ~ ಜೊತೆಗೆ ತಮ್ಮ ಚಿತ್ರವನ್ನೂ ದೀಪಿಕಾ ಒಪ್ಪಿಕೊಂಡಿದ್ದಾಳೆ ಎಂದು ಹೇಳಿರುವ ಐಶ್ವರ್ಯಾ ಕತ್ರೀನಾಳನ್ನು ಕೈಬಿಡಲು ಕಾರಣವೇನು ಎಂಬುದನ್ನು ಮಾತ್ರ ತಿಳಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry