ಬೊಂಬಾಟ್ ಬಾಲಿವುಡ್

7

ಬೊಂಬಾಟ್ ಬಾಲಿವುಡ್

Published:
Updated:
ಬೊಂಬಾಟ್ ಬಾಲಿವುಡ್

ತಮಿಳು ಚಿತ್ರದಲ್ಲಿ ಸೋನಮ್

ಬಾಲಿವುಡ್‌ನಲ್ಲಿ ಬೇಡಿಕೆ ಕಳೆದುಕೊಂಡ ನಂತರ ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಕಣ್ಣು ಹೊರಳಿಸುತ್ತಿದ್ದ ನಾಯಕಿಯರ ಕಾಲ ಹೋಯಿತು. ಇದು ಬೇಡಿಕೆಯ ತುತ್ತತುದಿಯಲ್ಲಿರುವ ಬಾಲಿವುಡ್ ನಾಯಕಿಯರು ಮಣಿರತ್ನಂ ಮತ್ತು ಮುರುಗದಾಸ್ ಚಿತ್ರಗಳಲ್ಲಿ ನಟಿಸಲು ತುದಿಗಾಲಲ್ಲಿ ಕಾದು ನಿಂತಿರುವ ಕಾಲ. ಅದರಂತೆ ಮುರುಗದಾಸ್ ಅವರ ಮುಂದಿನ ಚಿತ್ರಕ್ಕೆ ಸೋನಮ್ ಆಯ್ಕೆಯಾಗಿದ್ದಾಳೆ. ಇದರಿಂದ ಉತ್ಸುಕಳಾಗಿರುವ ಸೋನಮ್ ತನ್ನ ತಂದೆ ಅನಿಲ್ ಕಪೂರ್ ಕೂಡ ದಕ್ಷಿಣ ಭಾರತದ ಕನ್ನಡ ಸಿನಿಮಾ ಮೂಲಕ ಬೆಳಕಿಗೆ ಬಂದವರು ಎಂದು ಹೇಳಿದ್ದಾಳೆ.ನಿರ್ದೇಶಕ ಎ.ಆರ್.ಮುರುಗದಾಸ್ `ಮಾಲೈ ನಿರತು ಮಝೈತಲಿ~ ಹೆಸರಿನ ಚಿತ್ರ ಆರಂಭಿಸುತ್ತಿದ್ದು, ಚಿತ್ರದ ನಾಯಕ ವಿಜಯ್. ನಾಯಕಿ ಸೋನಮ್ ಕಪೂರ್. `ಇದು ಆಕ್ಷನ್, ಅಡ್ವೆಂಚರ್, ಥ್ರಿಲ್ಲಿಂಗ್, ರೊಮ್ಯಾಂಟಿಕ್ ಸಿನಿಮಾ. ಇದನ್ನು ಹಿಂದಿಯಲ್ಲೂ ರೂಪಿಸುವುದರಿಂದ ಸೋನಮ್ ಸೂಕ್ತ ನಾಯಕಿ ಎನಿಸಿತು ಎಂದು ಮುರುಗದಾಸ್ ಹೇಳಿದ್ದಾರೆ. `ಸ್ಕ್ರಿಪ್ಟ್ ಕೇಳಿ ಸಿಕ್ಕಾಪಟ್ಟೆ ಇಷ್ಟಪಟ್ಟೆ~ ಎಂದಿರುವ ಸೋನಮ್ ಈಗಾಗಲೇ ತಮಿಳು ಕಲಿಯುವಲ್ಲಿಯೂ ನಿರತಳಾಗಿದ್ದಾಳಂತೆ.

ಅಮೀರರ `ತಲಾಶ್~

ಅಮೀರ್ ಖಾನ್ ಸದ್ದಿಲ್ಲದೇ ರೀಮಾ ಕಗ್ತಿ ನಿರ್ದೇಶನದ ಚಿತ್ರ ಮುಗಿಸಿದ್ದಾರೆ. ಅದಕ್ಕೆ ಅಂತಿಮವಾಗಿ `ತಲಾಶ್~ ಎಂಬ ಹೆಸರನ್ನು ಇಡಲಾಗಿದೆ. ಫರಾನ್ ಅಖ್ತರ್, ರಿತೇಶ್ ಸಿದ್ವಾನಿ ಅವರೊಂದಿಗೆ ಅಮೀರ್ ಕೂಡ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಮೊದಲು ಅಮೀರ್ ನಿರ್ಮಾಣದ `ಪೀಪ್ಲಿ ಲೈವ್~ ಚಿತ್ರ ನಿರ್ದೇಶಿಸಿ ಪ್ರಶಂಸೆಗೆ ಗುರಿಯಾದ ರೀಮಾ `ತಲಾಶ್~ ಮೂಲಕ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಆಕ್ಷನ್, ಥ್ರಿಲ್ಲರ್ ಕತೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಅಮೀರ್ ಖಾನ್ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಜೊತೆಯಾಗಿ ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಇದ್ದಾರೆ.ರೀಮಾ ಬಗ್ಗೆ ಅಮೀರ್ ಭರವಸೆಯ ಮಾತುಗಳನ್ನಾಡುತ್ತಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry