ಬೊಂಬಾಟ್ ಬಾಲಿವುಡ್

7

ಬೊಂಬಾಟ್ ಬಾಲಿವುಡ್

Published:
Updated:
ಬೊಂಬಾಟ್ ಬಾಲಿವುಡ್

`ಪಾನಿ'ಯಲ್ಲಿ ಹೃತಿಕ್

ಅಂತೂ ಇಂತೂ ಹೃತಿಕ್ ರೋಶನ್ `ಪಾನಿ' ಚಿತ್ರಕ್ಕೆ ರುಜು ಹಾಕಿದ್ದಾರೆ. ಇತ್ತೀಚೆಗೆ ಶೇಖರ್ ಕಪೂರ್ ತಮ್ಮ `ಪಾನಿ' ಚಿತ್ರವನ್ನು ಹೃತಿಕ್ ನಿರಾಕರಿಸಿದರು ಎಂದು ಹೇಳಿ ನೊಂದುಕೊಂಡಿದ್ದರು. ಅದರ ಬೆನ್ನಲ್ಲೇ ಚಿತ್ರ ನಿರ್ಮಾಣದ ಹೊಣೆಯನ್ನು ಯಶ್‌ರಾಜ್ ಸಂಸ್ಥೆ ವಹಿಸಿಕೊಂಡ ಸುದ್ದಿ ಬಂತು. ಇದೀಗ ಹೃತಿಕ್ ನಾಯಕನಾಗಲು ಒಪ್ಪಿಗೆ ಮುದ್ರೆ ಹಾಕಿರುವ ಸುದ್ದಿ ಬಂದಿದೆ. `ಇದು ನನ್ನ 15 ವರ್ಷಗಳ ಹಿಂದಿನ ಕತೆ. ಅದನ್ನು ಸಮಕಾಲೀನ ಸನ್ನಿವೇಶಕ್ಕೆ ಬದಲಿಸಿದ್ದೇನೆ. ನಾಯಕನಿಗೆ ಚಿತ್ರದಲ್ಲಿ ಬಡ ಹುಡುಗನ ಪಾತ್ರ.ಮುಂಬೈನಲ್ಲಿಯೇ ಚಿತ್ರೀಕರಣ ನಡೆಯಲಿದೆ. ಹೃತಿಕ್ ಪಾತ್ರಕ್ಕೆ ಒಪ್ಪದೇ ಹೋದಾಗ ನಾನು ವಿವೇಕ್ ಒಬೆರಾಯ್ ಮತ್ತು ರಣಬೀರ್ ಕಪೂರ್ ಅವರನ್ನು ಸಂಪರ್ಕಿಸಿದ್ದೆ. ಅಂತಿಮವಾಗಿ ನನ್ನ ನಾಯಕ ನನಗೆ ಸಿಕ್ಕಿದರು' ಎಂದು ಶೇಖರ್ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಹೃತಿಕ್ ತಾವು ಬಿಜಿ ಇದ್ದ ಕಾರಣ `ಪಾನಿ' ಕತೆಯನ್ನು ಕೇಳಲು ಆಗಿರಲಿಲ್ಲ. ಕತೆ ಕೇಳಿದ ಮೇಲೆ ನಿರಾಕರಿಸಲು ಕಾರಣವೇ ಇರಲಿಲ್ಲ ಎಂದಿದ್ದಾರೆ.ಕಿಶೋರ್ ಪಾತ್ರದಲ್ಲಿ ರಣಬೀರ್

`ಬರ್ಫಿ' ಚಿತ್ರದ ಯಶಸ್ಸಿನ ನಂತರ ಅನುರಾಗ್ ಬಸು ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದು ಗಾಯಕ, ನಟ ಕಿಶೋರ್ ಕುಮಾರ್ ಅವರ ಜೀವನದ ಕತೆಯನ್ನು ಆಧರಿಸಿದ ಸಿನಿಮಾ. ಕಿಶೋರ್ ಪಾತ್ರಕ್ಕಾಗಿ ರಣಬೀರ್ ಕಪೂರ್ ಅವರನ್ನು ಒಪ್ಪಿಸಿರುವ ಬಸು, ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.`ಈ ಚಿತ್ರದಲ್ಲಿ ನಾನು 19ನೇ ವಯಸ್ಸಿನಿಂದ 58 ವರ್ಷಗಳವರೆಗಿನ ನಾಲ್ಕು ಆಯಾಮದ ಪಾತ್ರ ನಿರ್ವಹಿಸಬೇಕಿದೆ. ಅದರಿಂದ ದಪ್ಪಗಾಗಬೇಕಿದೆ' ಎಂದು ರಣಬೀರ್ ಕಪೂರ್ ಪಾತ್ರದ ಸವಾಲನ್ನು ವಿವರಿಸಿದ್ದಾರೆ. ಇನ್ನೂ ಹೆಸರಿಡದ, ತಮ್ಮ ಮಹಾತ್ವಾಕಾಂಕ್ಷೆಯ ಚಿತ್ರದ ಕಿಶೋರ್ ಪಾತ್ರಕ್ಕೆ ರಣಬೀರ್ ನ್ಯಾಯ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಸು ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಣಬೀರ್‌ಗೆ ನಾಲ್ವರು ನಾಯಕಿಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry