ಗುರುವಾರ , ಜೂಲೈ 2, 2020
23 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಂಬಾಟ್ ಬಾಲಿವುಡ್

ಗಿನ್ನೆಸ್ ಗೆ ‘ಮುನ್ನಿ..’

‘ದಬಂಗ್’ ಚಿತ್ರದ ಸಲ್ಮಾನ್ ಖಾನ್ ಮತ್ತು ಮಲೈಕಾ ಅರೋರಾ ಕುಣಿದಿದ್ದ ‘ಮುನ್ನಿ ಬದ್‌ನಾಮ್ ಹುಯಿ..’ ಹಾಡು ಗಿನ್ನೆಸ್ ದಾಖಲೆ ಸೇರಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದ 2011ನೇ ವರ್ಷದ ಭಾರತೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಮಲೈಕಾ ಅರೋರಾ ಜೊತೆ 1200 ಜನ 30 ನಿಮಿಷ ಈ ಹಾಡಿಗೆ ನರ್ತಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಸಮಾರಂಭವನ್ನು ಮಿತು ಬೌಮಿಕ್ ಲಾಂಜೆ ಆಯೋಜಿಸಿದ್ದರು. ಈ ಹಾಡಿಗೆ ಅಷ್ಟೂ ಜನ ಒಂದೇ ನರ್ತನ ಶೈಲಿಯಲ್ಲಿ ಕುಣಿದದ್ದೇ ದಾಖಲೆ ಸೇರಲು ಕಾರಣ. ಈ ಮೊದಲು ಇದೇ ಹಾಡಿಗೆ ಸಿಂಗಾಪುರದಲ್ಲಿ 1008 ಜನ ಕುಣಿದಿದ್ದರು.‘ಇಷ್ಟು ದೊಡ್ಡ ಗುಂಪು ಒಂದೇ ಶೈಲಿಯಲ್ಲಿ ನರ್ತಿಸಿದ್ದು ಆಶ್ವರ್ಯಕರ’ ಎಂದಿರುವ ಮಲೈಕಾ ಸಮಾರಂಭದಲ್ಲಿ ಪತಿ ಅರ್ಬಾಜ್ ಖಾನ್ ಮತ್ತು ಮಗನೊಂದಿಗೆ ಭಾಗವಹಿಸಿದ್ದರು.ಬಿಪಾಶಾ ಬದ್ಧತೆ

ರೋಹನ್ ಸಿಪ್ಪಿ ಅವರ ‘ದಮ್ ಮಾರೊ ದಮ್’ ಚಿತ್ರದ ಪ್ರೊಮೊಗಳಲ್ಲಿ ಕೇವಲ ದೀಪಿಕಾ ಪಡುಕೋಣೆ ರಾರಾಜಿಸುತ್ತಿದ್ದಾಳೆ ಎಂಬುದು ಚಿತ್ರದ ಮತ್ತೊಬ್ಬ ನಾಯಕಿ ಬಿಪಾಶಾ ಬಸು ಅಳಲು. ಇದೀಗ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಅವರು, ‘ಚಿತ್ರದಲ್ಲಿ ತಮಗೂ ಪ್ರಮುಖ ಪಾತ್ರ ಇದೆ. ಅಭಿಷೇಕ್ ಬಚ್ಚನ್, ರಾಣಾ ದಗ್ಗುಬಟಿ, ಪ್ರತೀಕ್ ಬಬ್ಬರ್, ದೀಪಿಕಾ ಮತ್ತು ತಾನು ಗೋವಾದಲ್ಲಿ ಗೆಳೆಯರಾಗುತ್ತೇವೆ. ಅಲ್ಲಿಂದ ಚಿತ್ರದ ಕತೆ ನಡೆಯಲಿದೆ. ಡ್ರಗ್ ಮಾಫಿಯಾ ಕೂಡ ಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ತಿಳಿಸಿದ್ದಾರೆ.ಬಿಪಾಶಾಗೆ ಚಿತ್ರದಲ್ಲಿ ಗಗನಸಖಿಯ ಪಾತ್ರವಂತೆ. ದೀಪಿಕಾಗೆ ಮಾತ್ರ ಪ್ರಚಾರ ಭಾಗ್ಯ ಸಿಗುತ್ತಿರುವ ಬಗ್ಗೆ ಬೇಸರಗೊಂಡಿರುವ ಅವರು. ‘ಚಿತ್ರದ ಕತೆಯನ್ನು ಮೆಚ್ಚಿ ಚಿತ್ರ ಒಪ್ಪಿಕೊಂಡೆ. ನಿರ್ದೇಶಕರು ಮತ್ತು ನಿರ್ಮಾಪಕ ಅಸಡ್ಡೆಯಿಂದ ಬೇಸರವಾಗುತ್ತಿದ್ದರೂ ಕತೆಗೆ ನಾನು ಬದ್ಧವಾಗಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.