ಬೊಜ್ಜು-ಮಧುಮೇಹಕ್ಕೆ ಆಹಾರ ಪ್ರಾತ್ಯಕ್ಷಿಕೆ

ಶುಕ್ರವಾರ, ಜೂಲೈ 19, 2019
28 °C

ಬೊಜ್ಜು-ಮಧುಮೇಹಕ್ಕೆ ಆಹಾರ ಪ್ರಾತ್ಯಕ್ಷಿಕೆ

Published:
Updated:

ಮೈಸೂರು: ಬೊಜ್ಜು ಹಾಗೂ ಮಧುಮೇಹ ಇರುವವರು ತೆಗೆದುಕೊಳ್ಳಬಹುದಾದ ಆಹಾರ ಪದಾರ್ಥ ಹೇಗಿರಬೇಕು ಎಂದು ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ವಿಶೇಷ ಕಾರ್ಯಕ್ರಮವನ್ನು ರಿವರ್ ವ್ಯೆ ಆಸ್ಪತ್ರೆಯ ಧನ್ವಂತರಿ ವಿಭಾಗವು ಜುಲೈ 15 ರಂದು ಬೆಳಿಗ್ಗೆ 9.30ಕ್ಕೆ ವಿಶ್ವೇಶ್ವರನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಆಯುರ್ವೇದ ವಿಭಾಗದ ಡಾ.ಡಿ.ಎನ್.ಅರುಣ್‌ಕುಮಾರ್ ಈ ಮಾಹಿತಿ ನೀಡಿದರು. ಆಹಾರದ ಸಮತೋಲನದಿಂದ ಬೊಜ್ಜು ಹಾಗೂ ಮಧುಮೇಹ ತಡೆಗಟ್ಟಬಹುದು. ಇದರ ಬಗ್ಗೆ ಸಮಗ್ರ ಮಾಹಿತಿ ನೀಡಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.ಆಹಾರ ಸೇವನೆ ಬಗ್ಗೆ ಡಾ.ಗಜಾನನ ಹೆಗಡೆ, ಯೋಗದ ಬಗ್ಗೆ ಡಾ.ಅನಿಲ್ ಕುಮಾರ್ ಮಾತ ನಾಡುವರು. ಡಾ.ಚಂದ್ರಶೇಖರ್ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡುವರು.ಆಯುರ್ವೇದ ತಜ್ಞರು ಹಾಗೂ ಪಾಕಶಾಸ್ತ್ರ ಪ್ರವೀಣರ ಸಮನ್ವಯದ್ಲ್ಲಲಿ ತಯಾರಿಸಲಾದ ರುಚಿ ಕರ ಭೋಜನವನ್ನು ಅಂದು ಮಧ್ಯಾಹ್ನ 1ಗಂಟೆಗೆ ನೀಡಲಾಗುವುದು. ಬಾರ್ಲಿ ಹಾಗೂ ಗೋಧಿ ರೊಟ್ಟಿ, ಮೆಂತೆ ಹಲ್ವ, ಹೀರೇಕಾಯಿ ಸಿಪ್ಪೆಯ ಚಟ್ನಿ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ ಎಂದು ತಿಳಿಸಿದರು.ಡಾ. ವೇದಾಂತ್ ಪತ್ರಿಕಾಗೋಷ್ಠಿಯಲ್ಲಿದ್ದರು. ಮಾಹಿತಿಗೆ 96202 20024ನ್ನು ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry