ಬೊಜ್ಜು; ಮೂರು ಪೀಳಿಗೆಗೆ ಮಾರಕ!

7

ಬೊಜ್ಜು; ಮೂರು ಪೀಳಿಗೆಗೆ ಮಾರಕ!

Published:
Updated:
ಬೊಜ್ಜು; ಮೂರು ಪೀಳಿಗೆಗೆ ಮಾರಕ!

ಗರ್ಭಿಣಿಯಾಗುವುದಕ್ಕೂ ಮುನ್ನವೇ ಅಧಿಕ ಕೊಬ್ಬಿನ ಅಂಶಗಳುಳ್ಳ ಆಹಾರದಿಂದ ಬೊಜ್ಜು ಬೆಳೆಸಿಕೊಂಡ ಮಹಿಳೆಯರು ತಮ್ಮ ನಂತರದ ಮೂರು ತಲೆಮಾರಿಗೆ ಸ್ಥೂಲಕಾಯದ ಶಾಪವನ್ನು ವರ್ಗಾಯಿಸುತ್ತಾರೆ.ಈ ತಾಯಂದಿರ ಮಕ್ಕಳು ಅತ್ಯಂತ ಹಿತಮಿತ ಹಾಗೂ ಆರೋಗ್ಯಕರ ಶೈಲಿಯ ಆಹಾರ ಪದ್ಧತಿ ಅನುಸರಿಸಿದರೂ ಅವರಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ ಸಂಶೋಧಕರು. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಅಂಶ ಬೆಳಕಿಗೆ ಬಂದಿದೆ.ತಾಯಂದಿರಲ್ಲಿನ ಬೊಜ್ಜುತನ, ಅವರ ಮೂರು ತಲೆಮಾರಿನ ಜನರಲ್ಲಿ ಮಧುಮೇಹ ಟೈಪ್‌–2, ಹೃದಯ ಸಂಬಂಧಿ ಕಾಯಿಲೆ ಮತ್ತು ವಂಶವಾಹಿಯಲ್ಲಿನ ಅಸಹಜತೆಗಳಿಗೆ ಕಾರಣವಾಗುವ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕೆಲ್‌ ಮೊಲೀ.ಅಮ್ಮಂದಿರಲ್ಲಿನ ಬೊಜ್ಜು ಮತ್ತು ಅದರಿಂದ ಹುಟ್ಟಿಕೊಂಡ ಜೀರ್ಣಕ್ರಿಯೆ ಸಮಸ್ಯೆಗಳು ಮೈಟೊಕಾಂಡ್ರಿಯದ ಡಿಎನ್‌ಎ ಮೂಲಕ ಮಕ್ಕಳಿಗೂ ದಾಟುತ್ತವೆ. ಜೀರ್ಣಕ್ರಿಯೆ ಸಮಸ್ಯೆಯುಳ್ಳ ಇಲಿಗಳ ಮೇಲೆ ಅಧ್ಯಯನ ನಡೆಸಿದಾಗ,ಅವುಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಮೈಟೊಕಾಂಡ್ರಿಯದ ಸಮಸ್ಯೆಯು ಅದರ ಮೂರು ಪೀಳಿಗೆಗೂ ತಾಯಿಯ ಅಂಡಾಣುವಿನ ಮೂಲಕ ರವಾನೆಯಾಗುವುದು ಖಚಿತವಾಗಿದೆ.ಶೇ 60ರಷ್ಟು ಕೊಬ್ಬಿನಂಶ ಮತ್ತು ಶೇ 20ರಷ್ಟು ಸಕ್ಕರೆಯ ಅಂಶದ ಆಹಾರ ನೀಡಿ ಸ್ಥೂಲಕಾಯಿಗಳನ್ನಾಗಿಸಿದ ಇಲಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿದೆ.ದಶಕಗಳಿಂದ ನಮ್ಮ ಆಹಾರ ಪದ್ಧತಿ ಹದ ತಪ್ಪಿದೆ. ಫಾಸ್ಟ್‌ಫುಡ್‌ ಮತ್ತು ಅಸುರಕ್ಷಿತ ಆಹಾರಗಳ ಅತಿಯಾದ ಸೇವನೆಯು ಈಗಿನ ಸ್ಥೂಲಕಾಯದ ಸಮಸ್ಯೆಗೆ ಕಾರಣವಾಗಿದೆ.ಮನುಷ್ಯರಲ್ಲಿ ಮಕ್ಕಳ ಆಹಾರ ಸೇವನೆ ಹೆಚ್ಚೂ ಕಡಿಮೆ ಪೋಷಕರಂತೆಯೇ ಇರುತ್ತದೆ. ಹೀಗಾಗಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ತಿಳಿದುಕೊಂಡ ಕಾಯಿಲೆಗಳ ಅಪಾಯ ಮನುಷ್ಯರಲ್ಲಿ ಇನ್ನೂ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry