ಬುಧವಾರ, ನವೆಂಬರ್ 20, 2019
24 °C

ಬೊವ್ವೇರಿಯಂಡ ತಂಡಕ್ಕೆ ಜಯ

Published:
Updated:

ವಿರಾಜಪೇಟೆ: ಬೊವ್ವೇರಿಯಂಡ ತಂಡವು ಬಾಳುಗೋಡಿನಲ್ಲಿ ನಡೆಯುತ್ತಿರುವ ಮಾದಂಡ ಕಪ್ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಮಂಗಳವಾರ ರೋಚಕ ಜಯ ಸಾಧಿಸಿತು.ಟೈಬ್ರೇಕರ್‌ನಲ್ಲಿ ಅಂತ್ಯವಾದ ಪಂದ್ಯದಲ್ಲಿ ಬೊವ್ವೇರಿಯಂಡ 4-3 ಗೋಲುಗಳಿಂದ ನೆರವಂಡ ತಂಡದ ವಿರುದ್ಧ ಜಯ ಗಳಿಸಿತು. ಪಂದ್ಯದ ನಿಗದಿತ ಅವಧಿ ಮುಗಿದಾಗ 1-1 ಗೋಲುಗಳಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದ್ದರಿಂದ ನಂತರ  ಟೈಬ್ರೇಕರ್‌ನಲ್ಲಿ ನಿತಿನ್ ಮೇದಪ್ಪ, ಜಿತನ್ ಕಾಳಪ್ಪ, ವರುಣ್ ತಲಾ ಒಂದು ಗೋಲನ್ನು ಬಾರಿಸಿದರು. ಬೋಪಯ್ಯ, ಪ್ರಶಾಂತ್ ತಲಾ ಒಂದು ಗೋಲು ಗಳಿಸಿದರು.ಇನ್ನುಳಿದ ಪಂದ್ಯಗಳಲ್ಲಿ  ಪೆಮ್ಮಂಡ ತಂಡವು 4-1 ಗೋಲುಗಳಿಂದ ಮಾತಂಡ ವಿರುದ್ಧ;  ತೀತಮಾಡ ತಂಡವು 1-0ಯಿಂದ ಕೆಚ್ಚೆಟ್ಟಿರ ವಿರುದ್ಧ; ಕಬ್ಬಚ್ಚಿರ ತಂಡವು, ಅಪ್ಪಂಡರೆಂಡ ತಂಡದ ವಿರುದ್ಧ 5-0 ಗೋಲುಗಳಿಂದ;

ಇದೇ ಅವಧಿಯಲ್ಲಿ ನಡೆದ ಪಂದ್ಯಾಟದಲ್ಲಿ ಕುಟ್ಟೇರಿರ ತಂಡ ಹಾಗೂ ಮಾದೆಯಂಡ ತಂಡಗಳು ಟೈ-ಬ್ರೇಕ್‌ನಲ್ಲಿಕುಟ್ಟೇರಿರ ತಂಡ 8-7 ರ ಗೋಲುಗಳಿಂದ;  ಬೊಳ್ಳಂಡ ತಂಡವು 1-0ಯಿಂದ ಪಾಡೆಯಂಡ ವಿರುದ್ದ; ಅಮ್ಮಂಡ ತಂಡವು 3-1ರಿಂದ ಪಾಸುರ  ವಿರುದ್ಧ;  ಮಾಳೇಟಿರ(ಕೆದಮುಳ್ಳೂರು) ತಂಡವು 3-1ರಿಂದ ದೇಯಂಡ ತಂಡದ ವಿರುದ್ಧ;  ಚೇಂದಿರ ತಂಡವು 2-1ರಿಂದ ಕಾಡ್ಯಮಾಡ  ವಿರುದ್ಧ;  ಅಲ್ಲಪಂಡ ತಂಡವು 1-0ಯಿಂದ  ಮುಂಡ್ಯೋಳಂಡ ವಿರುದ್ಧ;  ಚೀಯಂಡ ತಂಡವು 3-1ರಿಂದ ಮಂಡೆಡ ತಂಡದ ವಿರುದ್ಧ;

ಕುಪ್ಪಂಡ ತಂಡವು ಅಪ್ಪನೆರವಂಡ ತಂಡದ ವಿರುದ್ದ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.ಬುಧವಾರದ ಪಂದ್ಯಗಳು

ಮೈದಾನ 1: 9.ಗಂಟೆಗೆ ಚೆಂದೂರ ಮತ್ತು ಪುಚ್ಚಿಮಾಡ, 10ಕ್ಕೆ ಪೊನ್ನೋಳ್‌ತಂಡ ಮತ್ತು ಬಾಳೆಯಡ, 11ಕ್ಕೆ ತಂಬೆಕುಟ್ಟಿರ ಮತ್ತು ಮುಕ್ಕಾಟಿರ, 1ಕ್ಕೆ  ಚೇಂದಂಡ ಮತ್ತು ಚಿಂಡಮಾಡ, 2 ಗಂಟೆಗೆ ಮೂಡೇರ ಮತ್ತು ಗಂಡಂಗಡ, 3ಕ್ಕೆ  ಅಜ್ಜೆಟ್ಟಿರ ಮತ್ತು ನಂಬುಡುಮಾಡ.ಮೈದಾನ-2: 9 ಗಂಟೆಗೆ ಮರ್ಚಂಡ ಮತ್ತು ಐಚಂಡ, 10ಕ್ಕೆ  ಚೋಯಮಾದಂಡ ಮತ್ತು ಅಪ್ಪಚ್ಚಿರ, 11ಕ್ಕೆ ಮಚ್ಚಾರಂಡ ಮತ್ತು ಕೊಂಗೆಟ್ಟಿರ, 1ಕ್ಕೆ ಕಂಡಂಡ ಮತ್ತು ಕಂಡೇರ, 3ಕ್ಕೆ ಕೇಳೇಟಿರ ಮತ್ತು ಬಲ್ಲಚಂಡ.

ಪ್ರತಿಕ್ರಿಯಿಸಿ (+)