ಬೋಗಿಗೆ ಬೆಂಕಿ: ಹಿರಿಯ ಅಧಿಕಾರಿಗಳಿಂದ ಪರಿಶೀಲನೆ

7

ಬೋಗಿಗೆ ಬೆಂಕಿ: ಹಿರಿಯ ಅಧಿಕಾರಿಗಳಿಂದ ಪರಿಶೀಲನೆ

Published:
Updated:

ಗುಲ್ಬರ್ಗ: ಹೈದರಾಬಾದ್-ಸೊಲ್ಲಾಪುರ ರೈಲು ಬೋಗಿಯೊಂದು ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಬುಧವಾರ ಹೊತ್ತಿ ಉರಿದ ಸ್ಥಳಕ್ಕೆ ಬೆಂಗಳೂರಿನ ರೈಲ್ವೆ ಡಿಐಜಿ ಶ್ರೀಕಂಠಪ್ಪ, ದಕ್ಷಿಣ ಮಧ್ಯ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಚೇತನ ಬಕ್ಷಿ, ವಿಭಾಗೀಯ ಸುರಕ್ಷಿತ ಅಧಿಕಾರಿ ಕೆ.ಕೆ. ಶರ್ಮಾ ಆಗಮಿಸಿ ಗುರುವಾರ ಪರಿಶೀಲನೆ ನಡೆಸಿದರು.

ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟು ಏಳು ಜನರಿಗೆ ಗಾಯಗಳಾಗಿದ್ದವು.ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ ಬಕ್ಷಿ, `ಘಟನೆಯಲ್ಲಿ ಸಜೀವ ದಹನಗೊಂಡವರ ಅಸ್ಥಿಗಳನ್ನು ವಿಧಿವಿಜ್ಞಾನ ಇಲಾಖೆಗೆ ರವಾನಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಸಾಕ್ಷಿ ಹೇಳಿಕೆ ನೀಡುವವರಿಗಾಗಿ ಒಂದು ತಿಂಗಳ ಸಮಯಾವಕಾಶ ನೀಡಲಾಗುವುದು~ ಎಂದರು.ಬೋಗಿಗೆ ಬೆಂಕಿ ಬಗ್ಗೆ 6 ತಿಂಗಳ ನಂತರ ಪ್ರಥಮ ವರದಿ ಬಿಡುಗಡೆ ಮಾಡಲಾಗುವುದು. ತನಿಖೆ ಇಂದೇ ಆರಂಭವಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry