ಬೋಧನಾ ಶುಲ್ಕ ಪರಿಷ್ಕರಣೆ ಆದೇಶಕ್ಕೆ ಆಕ್ರೋಶ

7

ಬೋಧನಾ ಶುಲ್ಕ ಪರಿಷ್ಕರಣೆ ಆದೇಶಕ್ಕೆ ಆಕ್ರೋಶ

Published:
Updated:

ಶಿವಮೊಗ್ಗ: ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಬೋಧನಾ ಶುಲ್ಕ ಪರಿಷ್ಕರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಮಂಗಳವಾರ ನಗರದ ಡಿವಿಎಸ್ ಕಾಲೇಜು ಎದುರು ರಸ್ತೆತಡೆ ನಡೆಸಿದರು.ಈ ಹಿಂದೆ ಆದಾಯ ಪ್ರಮಾಣಪತ್ರ ಸಲ್ಲಿಸುವ ಪ್ರವರ್ಗ 1, 2ಎ, 3ಎ ಹಾಗೂ 3ಬಿ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಬೋಧನಾ ಶುಲ್ಕ ವಿನಾಯ್ತಿ ನೀಡುತ್ತಿತ್ತು. ಕಾಲೇಜು ಪ್ರವೇಶದ ಸಂದರ್ಭದಲ್ಲಿಯೇ ಬೋಧನಾ ಶುಲ್ಕ ವಿನಾಯ್ತಿ ಸೌಲಭ್ಯ ಕಲ್ಪಿಸಲಾಗುತ್ತಿತ್ತು.ಈ ಶುಲ್ಕವನ್ನು ಸರ್ಕಾರ ಪಾವತಿಸುತ್ತಿತ್ತು. ಇದರಿಂದ ಬಡವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು. ಈಚೆಗೆ ಬೋಧನಾ ಶುಲ್ಕ ಪಾವತಿ ವಿಧಾನ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಕಾರ ಆದಾಯ ಪ್ರಮಾಣಪತ್ರ ಸಲ್ಲಿಸುವ ವಿದ್ಯಾರ್ಥಿಗಳು ಕೂಡ ಬೋಧನಾ ಶುಲ್ಕ ಪಾವತಿಸಬೇಕಿದೆ. ಈ ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಮೂಲಕ ಮರುಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ ಎಂದರು. ಪ್ರತಿಭಟನೆಯ ನೇತೃತ್ವವನ್ನು ಶಿವಮೊಗ್ಗ-ಚಿಕ್ಕಮಗಳೂರು ಎನ್‌ಎಸ್‌ಯುಐ ಅಧ್ಯಕ್ಷ ಸಿ.ಜಿ. ಮಧುಸೂದನ್,  ಪ್ರಧಾನ ಕಾರ್ಯದರ್ಶಿ ಚೇತನ್, ನಗರಾಧ್ಯಕ್ಷ ಶ್ರೀಜಿತ್, ಮಧುಶ್ರೀ, ವಿದ್ಯಾ, ಮಂಜುನಾಥ್, ಸಂತೋಷ್, ಗುರುಮೂರ್ತಿ, ವಿನೋದ್, ಕಿರಣ್, ಅನಿಲ್‌ಅನಿಲ್ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry