ಬೋನಿಗೆ ಬಿದ್ದಿದ್ದ ಸೈಕೊ

7

ಬೋನಿಗೆ ಬಿದ್ದಿದ್ದ ಸೈಕೊ

Published:
Updated:

ಚಡಚಣ (ವಿಜಾಪುರ ಜಿಲ್ಲೆ): ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವಾರು ಜಿಲ್ಲೆಗಳ ಜನರ ನಿದ್ದೆಗೆಡಿಸಿದ್ದ ಸೈಕೊ ಕಿಲ್ಲರ್ ಜೈಶಂಕರ್ ಅನಾಯಾಸವಾಗಿ 2011ರಲ್ಲಿ ಇಲ್ಲಿ ಬಂಧನಕ್ಕೊಳಗಾದ ಘಟನೆಯನ್ನು ಸ್ಥಳೀಯರು ಮರೆತಿಲ್ಲ. ಆದರೆ ಈಗ ಆತ ಈಗ ಬೆಂಗಳೂರು ಜೈಲಿನಿಂದ ಪರಾರಿಯಾಗಿದ್ದು, ಇಲ್ಲಿನ ಜನರಲ್ಲಿ ಮತ್ತೆ ಆತಂಕ ಉಂಟಾಗಿದೆ.ಕಳೆದ 2011 ಮೇ 3ರಂದು ವಿಜಾಪುರದಿಂದ-ಸೋಲಾಪುರ ಕಡೆಗೆ ಪ್ರಯಾಣಿಸುತ್ತಿದ್ದ ಜೈಶಂಕರ್, ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿರುವ ಏಳಗಿ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ.ಬಂಧನದ ಮೊದಲು ನಾಲ್ಕೈದು ದಿನಗಳಿಂದ ಇಲ್ಲಿಯೇ ಬಿಡಾರ ಹೂಡಿದ್ದ ಸೈಕೊ, ಗೋಟ್ಯಾಳ, ಅರ್ಜನಾಳ ಹಾಗೂ ಏಳಗಿ ಗ್ರಾಮಗಳಲ್ಲಿ ಅಲೆದಾಡಿ, ಮಿಕ್ಸಿ, ಕುಕ್ಕರ್, ಚಿನ್ನದ ಸರಗಳನ್ನು ಅತಿ ಕಡಿಮೆ ಬೆಲೆಗೆ ಕೊಡುವುದಾಗಿ ಸೈಕೊ ನಂಬಿಸಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry