ಸೋಮವಾರ, ಜನವರಿ 27, 2020
27 °C

ಬೋನಿಗೆ ಬಿದ್ದ ಮತ್ತೊಂದು ಚಿರತೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೋನಿಗೆ ಬಿದ್ದ ಮತ್ತೊಂದು ಚಿರತೆ

ಎಚ್.ಡಿ. ಕೋಟೆ: ತಾಲ್ಲೂಕಿನ ಕಂಚ ಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇನಂದಿ ಗ್ರಾಮದ ಜಮೀನ ಒಂದರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆಯೊಂದು ಬುಧವಾರ ಬಿದ್ದಿದೆ.ಹೀರೇನಂದಿ ಗ್ರಾಮದ ಶಿವಣ್ಣ ಎಂಬುವವರ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಈ ಮೊದಲು ನ.26ರಂದು ಇದೇ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿತ್ತು.ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಮಂಜುನಾಥ್, ಜಮೀನಿಗೆ ಹತ್ತಿರವಾಗಿ ಯಾವುದೇ ಕಾಡು ಇಲ್ಲ. ಆದರೆ, ಜಮೀನಿನಲ್ಲಿರುವ ಕಬ್ಬಿನ ಗದ್ದೆಯಲ್ಲಿ ಚಿರತೆ ಕಂಡು ಬರುತ್ತಿತ್ತು. ಅಕ್ಕಪಕ್ಕದ ಜಮೀನುಗಳಿಗೆ ಬರುವ ಜಾನುವಾರುಗಳನ್ನು ಹಿಡಿದು ತಿನ್ನು ತ್ತಿತ್ತು. ಜಮೀನಿನ ಮಾಲೀಕ ಶಿವಯ್ಯ ಸೇರಿದಂತೆ ಗ್ರಾಮಸ್ಥರು ಚಿರತೆ ಇರುವ ಕುರಿತು ದೂರು ಕೊಟ್ಟಿದ್ದರು.2 ತಿಂಗಳ ಹಿಂದೆ ಬೋನನ್ನು ತಂದು ಇಡ ಲಾಗಿತ್ತು. ಇಟ್ಟ 1 ತಿಂಗಳಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿತ್ತು. ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಇನ್ನೂ ಒಂದು ಚಿರತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಾಗಾಗಿ, ಬೋನನ್ನು ಮತ್ತೆ ಅಲ್ಲೇ ಇಡಲಾಗು ವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)