ಭಾನುವಾರ, ಆಗಸ್ಟ್ 1, 2021
28 °C

ಬೋಪಣ್ಣ-ಖುರೇಷಿ ನಿರ್ಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಚುಗಲ್ (ಐಎಎನ್ ಎಸ್): ರೋಹನ್ ಬೋಪಣ್ಣ ಹಾಗೂ ಐಸಾಮ್ ಉಲ್-ಹಕ್-ಖುರೇಷಿ ಜೋಡಿ ಇಲ್ಲಿ ನಡೆಯುತ್ತಿರುವ ಇಷ್ಟೊರಿಲ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿತು.

ಇಲ್ಲಿ ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಡೋ ಪಾಕ್ ಎಕ್ಸ್‌ಪ್ರೆಸ್ ಬೋಪಣ್ಣ ಹಾಗೂ ಖುರೇಷಿ ಜೋಡಿ 2-6, 4-6ರಲ್ಲಿ ಅಮೆರಿಕದ ಎರಿಕ್ ಬುಟ್ರೋಚ್ ಹಾಗೂ ಹಾಲೆಂಡ್‌ನ ಜುಲೈನ್ ರೋಜರ್ ಎದುರು ಸೋತಿತು.

ಮೊದಲ ಸೆಟ್‌ನಲ್ಲಿ ಸುಲಭವಾಗಿ ಸೋಲು ಕಂಡ ಇಂಡೋ ಪಾಕ್ ಎಕ್ಸ್‌ಪ್ರೆಸ್ ಎರಡನೇ ಸೆಟ್‌ನಲ್ಲಿ ಉತ್ತಮ ಪ್ರತಿರೋಧವನ್ನು ತೋರಿತು.

ಎರಿಕ್ ಬುಟ್ರೋಚ್-ಜುಲೈನ್ ರೋಜರ್ ಹಾಗೂ ನಾಲ್ಕನೇ ಶ್ರೇಯಾಂಕದ ಮಾರ್ಕ್ ಲೋಪಿಜ್ -ಡೇವಿಡ್ ಮರಿಯೋ  ಫೈನಲ್ ಪಂದ್ಯದಲ್ಲಿ  ಪೈಪೋಟಿ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.