ಬೋಪಣ್ಣ ಜೊತೆ ಆಡಲು ಒಪ್ಪದ ಖುರೇಶಿ

7

ಬೋಪಣ್ಣ ಜೊತೆ ಆಡಲು ಒಪ್ಪದ ಖುರೇಶಿ

Published:
Updated:

ಲಾಹೋರ್ (ಪಿಟಿಐ): ಭಾರತದ ರೋಹನ್ ಬೋಪಣ್ಣ ಅವರೊಂದಿಗೆ ಡಬಲ್ಸ್‌ನಲ್ಲಿ ಮತ್ತೆ ಜೊತೆಗೂಡಿ ಆಡಲು ಪಾಕಿಸ್ತಾನದ ಟೆನಿಸ್ ಆಟಗಾರ ಐಸಾಮ್ ಉಲ್ ಹಕ್ ಖುರೇಶಿ ನಿರಾಕರಿಸಿದ್ದಾರೆ.ಒಂದು ವರ್ಷದ ಹಿಂದೆ ಬೋಪಣ್ಣ ಹಾಗೂ ಖುರೇಶಿ ಯಶಸ್ವಿ ಜೋಡಿ ಎನಿಸಿದ್ದರು. ಜೊತೆಯಾಗಿ ಆಡಿ ಹಲವು ಪ್ರಶಸ್ತಿ ಜಯಿಸಿದ್ದರು. ಆದರೆ ಮಹೇಶ್ ಭೂಪತಿ ಜೊತೆಗೂಡಿ ಆಡುವ ಉದ್ದೇಶದಿಂದ ರೋಹನ್ ಪಾಕ್ ಆಟಗಾರನಿಂದ ದೂರವಾಗಿದ್ದರು.ಮತ್ತೆ ಜೊತೆಗೂಡಿ ಆಡಲು ಬೋಪಣ್ಣ ಮಾಡಿದ ಮನವಿಯನ್ನು ಇದೀಗ ಖುರೇಶಿ ತಿರಸ್ಕರಿಸಿದ್ದಾರೆ ಎಂದು `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಪತ್ರಿಕೆ ಹೇಳಿದೆ. ಬದಲಾಗಿ ಈಗಿರುವ ಹಾಲೆಂಡ್‌ನ ಜೀನ್ ಜೂಲಿಯನ್ ರೋಜರ್ ಅವರೊಂದಿಗೆ ಮುಂದುವರಿಯುವುದಾಗಿ ಖುರೇಶಿ ತಿಳಿಸಿದ್ದಾರೆ.`ಬೋಪಣ್ಣ ನನ್ನ ಆತ್ಮೀಯ ಸ್ನೇಹಿತ. ಅವರೊಂದಿಗೆ ಆಡಲು ನಾನು ಖುಷಿಪಡುತ್ತೇನೆ. ಆದರೆ ಸದ್ಯ ಹಾಲೆಂಡ್ ಆಟಗಾರನೊಂದಿಗೆ ಮುಂದುವರಿಯುತ್ತೇನೆ. ಲಂಡನ್ ಮಾಸ್ಟರ್ಸ್ ಟೂರ್ನಿಯಲ್ಲಿ ಆಡುವ ಬಗ್ಗೆ ಗಮನ ಹರಿಸುತ್ತಿದ್ದೇನೆ. ಜೀನ್ ಜೂಲಿಯನ್ ಕೂಡ ಶ್ರಮ ಹಾಕಿ ಆಡುತ್ತಿದ್ದಾರೆ. ನಮ್ಮ ನಡುವಿನ ಹೊಂದಾಣಿಕೆ ಚೆನ್ನಾಗಿದೆ. ಹಾಗಾಗಿ ಸದ್ಯ ಅದನ್ನು ಬದಲಾಯಿಸುವ ಬಗ್ಗೆ ಯೋಚಿಸುವುದಿಲ್ಲ~ ಎಂದು ಅವರು ಹೇಳಿದ್ದಾರೆ.ಈ ವರ್ಷ ಐಸಾಮ್ ಅವರು ಹೇಲ್ ಹಾಗೂ ಎಸ್ಟೋರಿಲ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು. ಅಮೆರಿಕ ಓಪನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದರು. ಬೋಪಣ್ಣ ಹಾಗೂ ಖುರೇಶಿ ಒಟ್ಟಿಗೆ ಆಡುವಾಗ 2010ರ ಅಮೆರಿಕ ಓಪನ್ ಫೈನಲ್ ತಲುಪಿದ್ದರು. ಆದರೆ ಬೋಪಣ್ಣ ಲಂಡನ್ ಒಲಿಂಪಿಕ್ಸ್‌ನಲ್ಲಿ ಭೂಪತಿ ಜೊತೆಗೂಡಿ ಆಡುವ ಉದ್ದೇಶದ ಕಾರಣ ಖುರೇಶಿಯಿಂದ ಬೇರೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry