ಬೋಲಿಂಜರ್ ತವರಿಗೆ

7

ಬೋಲಿಂಜರ್ ತವರಿಗೆ

Published:
Updated:

ನಾಗಪುರ: ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮತ್ತೆ ಗಾಯದ ಸಮಸ್ಯೆ ಎದುರಾಗಿದೆ. ವೇಗದ ಬೌಲರ್ ಡಗ್ ಬೋಲಿಂಜರ್ ಅವರು ಗಾಯದ ಕಾರಣ ತವರಿಗೆ ಮರಳಲಿದ್ದಾರೆ.ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಕಾರಣ ಬೋಲಿಂಜರ್ ತಂಡವನ್ನು ತೊರೆದು ತವರಿಗೆ ಮರಳುವರು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಹೇಳಿಕೆ ತಿಳಿಸಿದೆ. ಆದರೆ ಅವರಿಗೆ ಬದಲಿ ಆಟಗಾರರನ್ನು ಸಿಎ ರಾಷ್ಟ್ರೀಯ ಆಯ್ಕೆ ಇನ್ನೂ ಸಮಿತಿ ಪ್ರಕಟಿಸಿಲ್ಲ.ಭಾರತದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಬೋಲಿಂಜರ್ ಗಾಯಗೊಂಡಿದ್ದರು. ಬಳಿಕ ಚೇತರಿಕೊಂಡಿದ್ದ ಅವರು ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದರು. ಆದರೆ ನಾಗಪುರಕ್ಕೆ ಬಂದಿಳಿದ ಬಳಿಕ ನೋವು ಮರುಕಳಿಸಿದೆ. ಈ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ.ಮೈಕ್ ಹಸ್ಸಿ, ನಥಾನ್ ಹೌರಿಜ್ ಮತ್ತು ಶಾನ್ ಮಾರ್ಷ್ ಅವರಂತಹ ಪ್ರಮುಖ ಆಟಗಾರರು ಗಾಯದ ಕಾರಣ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಆದರೆ ಬೋಲಿಂಜರ್ ಪ್ರಸಕ್ತ ವಿಶ್ವಕಪ್ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿ ತವರಿಗೆ ಮರಳಿದ ತಂಡದ ಮೊದಲ ಆಟಗಾರ ಎನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry