ಭಾನುವಾರ, ಮೇ 22, 2022
29 °C

ಬೌದ್ಧ ಧರ್ಮ ಬೆಳೆಸಿದ ಅಂಬೇಡ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಭಾರತದಲ್ಲಿ ಬೌದ್ಧ ಧರ್ಮವು ಪುನರುಜ್ಜೀವನವಾಗಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕಾರಣ. ಅವರ ಪ್ರಯತ್ನದ ಫಲವಾಗಿ ಇಂದು ಬೌದ್ಧ ಧರ್ಮ ದೇಶದಲ್ಲಿ ವ್ಯಾಪಕವಾಗಿ ಬೆಳೆದಿದೆ’ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.ಮಹಾಬೋಧಿ ಸೊಸೈಟಿಯು ಆಚಾರ್ಯ ಬುದ್ಧರಕ್ಖಿತ ಅವರ 90ನೇ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧಮ್ಮಪದ ಉತ್ಸವದಲ್ಲಿ ಅವರು ಮಾತನಾಡಿದರು.‘ಅಹಿಂಸೆ, ಮಾನವತಾವಾದವನ್ನು ಸಾರಿದ ಭಗವಾನ್ ಬುದ್ಧರ ಸಂದೇಶವನ್ನು ಸಾರುವ ಕಾರ್ಯವನ್ನು ಮಹಾಬೋಧಿ ಸೊಸೈಟಿಯು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಹಾಗೆಯೇ ಶಿಕ್ಷಣ, ಆರೋಗ್ಯ ಸೇವೆ ಸಲ್ಲಿಸುವ ಮೂಲಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ’ ಎಂದರು.‘ಬೆಂಗಳೂರಿನಲ್ಲಿರುವ ಮಹಾಬೋಧಿ ಸೊಸೈಟಿಯನ್ನು ನಿರ್ಮಿಸಿ ಬೆಳೆಸುವಲ್ಲಿ ಬುದ್ಧರಕ್ಖಿತರ ಕೊಡುಗೆ ಅಪಾರವಾಗಿದೆ. ಬೌದ್ಧ ತತ್ವಗಳನ್ನು ಅನುಸರಿಸುತ್ತಾ ಆದರ್ಶ ಜೀವನ ನಡೆಸುತ್ತಿರುವುದು ಎಲ್ಲರಿಗೂ ಮಾದರಿ’ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಕೇಂದ್ರ ವಸತಿ ಹಾಗೂ ನಗರ ಬಡತನ ನಿರ್ಮೂಲನಾ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಕುಮಾರಿ ಸೆಲ್ಜಾ, ‘ಭಗವಾನ್ ಬುದ್ದ ಪಾಲಿ ಮತ್ತು ತೆರವಾಡ ವಿಶ್ವವಿದ್ಯಾಲಯವು ಭವಿಷ್ಯದಲ್ಲಿ ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯವಾಗಲಿದೆ ಎಂಬ ವಿಶ್ವಾಸವಿದೆ. ಈ ವಿ.ವಿಗೆ ಅಗತ್ಯದ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ’ ಎಂದರು.‘ಅಹಿಂಸೆ, ದ್ವೇಷ, ಹಸಿವು, ಬಡತನ, ಪರಿಸರ ಮಾಲಿನ್ಯ ತೀವ್ರವಾಗಿರುವ ಈ ಸಂದರ್ಭದಲ್ಲಿ ಎಲ್ಲರೂ ಬೌದ್ಧ ಧರ್ಮದ ತತ್ವಗಳನ್ನು ಪಾಲಿಸಬೇಕಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ಜೀವನ ನಡೆಸಬೇಕು’ ಎಂದು ಹೇಳಿದರು. ಮಹಾಬೋಧಿ ಸೊಸೈಟಿಯ ಆನಂದ ಭಂತೆ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.