ಬೌದ್ಧ ಭಿಕ್ಕುಗಳೊಂದಿಗೆ ದಲೈ ಲಾಮಾ ಸಂವಾದ

7

ಬೌದ್ಧ ಭಿಕ್ಕುಗಳೊಂದಿಗೆ ದಲೈ ಲಾಮಾ ಸಂವಾದ

Published:
Updated:

ಮುಂಡಗೋಡ: ಟಿಬೆಟನ್ ಧರ್ಮಗುರು ದಲೈ ಲಾಮಾ ಇಲ್ಲಿನ ಕ್ಯಾಂಪ ನಂ.6ರ ಡ್ರೆಪುಂಗ್ ಬೌದ್ದ ಮಂದಿರದಲ್ಲಿ ಬುಧವಾರ ಬೌದ್ಧ ಭಿಕ್ಕುಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಬೌದ್ದ ಬಿಕ್ಕುಗಳೊಂದಿಗೆ ಧರ್ಮ ಹಾಗೂ ಬೌದ್ದ ಶಿಕ್ಷಣದ ಕುರಿತು ಚರ್ಚೆ ನಡೆಸಿದರು. ನಂತರ ಟಿಬೆಟನ್ ಕೇಂದ್ರೀಯ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.ತೊರ‌್ಲಿಂಗ್ ಹಾಗೂ ಸಕ್ಯಾ ಬೌದ್ಧ ಮಂದಿರಗಳಿಗೆ ಭೇಟಿ ನೀಡಿದರು. ಕಳೆದ 13ದಿನಗಳಿಂದ ಇಲ್ಲಿನ ಕ್ಯಾಂಪ್‌ನಲ್ಲಿ ಜಂಗ್‌ಚುಪ್ ಲಾಮ್ರಿನ್ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಬೌದ್ಧ ಭಿಕ್ಕುಗಳಿಗೆ ಬೋಧನೆ ನೀಡಿದ್ದರು. ಗಾಡೆನ್ ಜಾಂಗತ್ಸೆ ಹಾಗೂ ಡ್ರೆಪುಂಗ್ ಬೌದ್ದ ಮಂದಿರದಲ್ಲಿ ಒಂದೊಂದು ವಾರಗಳ ಕಾಲ ಪೂಜಾ ಕಾರ್ಯ ನಡೆಸಿ ಬೋಧನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 13ರಂದು ಟಿಬೆಟನ್ ಕ್ಯಾಂಪ್‌ನಿಂದ ಧರ್ಮಶಾಲಾದತ್ತ ಪ್ರಯಾಣ ಬೆಳೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry