ಗುರುವಾರ , ನವೆಂಬರ್ 14, 2019
22 °C

ಬೌಬೌ ಹಾವಳಿ: ಮಕ್ಕಳಿಬ್ಬರಿಗೆ ಗಾಯ

Published:
Updated:

ಗುಲ್ಬರ್ಗ: ವಿದ್ಯುತ್ ಹೋಗಿದ್ದ ಸಂದರ್ಭದಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ನಗರದ ವೀರೇಂದ್ರ ಪಾಟೀಲ್ ಪಾಟೀಲ ಬಡಾವಣೆ ಮೂರನೇ ಹಂತದಲ್ಲಿ ಗುರುವಾರ ಸಂಜೆ ನಡೆದಿದೆ.ನಾಲ್ಕು ವರ್ಷದ ಪಾರ್ವತಿ ಮತ್ತು ಪ್ರೇಮ್ ಗಾಯಗೊಂಡ ಪುಟಾಣಿಗಳು. ಅವರು ವಿದ್ಯುತ್ ಇಲ್ಲದ  ವೇಳೆಯಲ್ಲಿ ಪಕ್ಕದ ಮನೆಗೆ ಹೋಗುತ್ತಿದ್ದರು. ಆ ನಾಯಿಗಳು ದಾಳಿ ಮಾಡಿವೆ ಎನ್ನಲಾಗಿದೆ. ಸ್ಥಳಕ್ಕೆ ತೆರಳಿದ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಹಾಗೂ ಇತರರು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿ, ಸೂಕ್ತ ಕ್ರಮ ಕೈಗೊಳ್ಳಲು ನೆರವಾದರು.ಸೂಕ್ತ ಕ್ರಮ: `ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲಾಗಿದೆ. ಆದರೆ ಕಾನೂನಿನ ಹಿನ್ನೆಲೆಯಲ್ಲಿ ನಾಯಿಗಳನ್ನು ವಾಪಾಸು ಬಿಡಬೇಕಾಗಿ ಬಂತು. ಹೀಗೆ ಮತ್ತೆ ಬಿಟ್ಟಿದ್ದೇವೆ~ ಎಂದು ಪಾಲಿಕೆ ಆಯುಕ್ತ ಸಿ.ನಾಗಯ್ಯ ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದರು.ಈ ಹಿಂದೆ ನಾಯಿ ದಾಳಿ ತೀವ್ರಗೊಂಡಿದ್ದ ಸಂದರ್ಭ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆ ನಡೆದು ಕ್ರಮಕೈಗೊಳ್ಳಲು ಅನುದಾನ ನಿಗದಿಪಡಿಲಾಗಿತ್ತು. ನಾಯಿಗಳು ಮಾತ್ರ ಮತ್ತೆ ದಾಳಿ ನಡೆಸಿ ಸುದ್ದಿ ಮಾಡುತ್ತಲಿವೆ.  

ಪ್ರತಿಕ್ರಿಯಿಸಿ (+)