ಬ್ಯಾಂಕಾಕ್‌ನಲ್ಲಿ ಪ್ರವಾಹ ಇಳಿಮುಖ

7

ಬ್ಯಾಂಕಾಕ್‌ನಲ್ಲಿ ಪ್ರವಾಹ ಇಳಿಮುಖ

Published:
Updated:

ಬ್ಯಾಂಕಾಕ್ (ಎಪಿ): ಪ್ರವಾಹ ಕಡಿಮೆಯಾಗುತ್ತಿದ್ದು ದಶಕದಲ್ಲಿ ದೇಶದಲ್ಲಿ ಉಂಟಾದ ಅತ್ಯಂತ ಕೆಟ್ಟ ಪ್ರವಾಹದಿಂದ ಬ್ಯಾಂಕಾಕ್ ತಪ್ಪಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಥಾಯ್ಲೆಂಡ್ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಉತ್ತರದಿಂದ ಹರಿದು ಬರುತ್ತಿರುವ ಹೆಚ್ಚುವರಿ ನೀರು ಈಗಾಗಲೇ ಬ್ಯಾಂಕಾಕ್‌ನ ಚಾವೊ ಫ್ರಾಯಾ ನದಿಯನ್ನು ದಾಟಿ ಗಲ್ಫ್ ಆಫ್  ಥಾಯ್ಲೆಂಡ್ ಕಡೆಗೆ ಹೋಗಿದೆ ಎಂದು ಕೃಷಿ ಸಚಿವ ಥೀರಾ ವಾಂಗ್‌ಸಮುತ್ ಹೇಳಿದ್ದಾರೆ.

ಸಿಂಗ್‌ಬುರಿ, ಆ್ಯಂಗ್‌ಥಾಂಗ್ ಮತ್ತು ಹೆಚ್ಚು ಹಾನಿಗೊಳಗಾದ ಅಯುತ್ತಾಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕಾಕ್ ಸುಧೀರ್ಘವಾದ ಪ್ರವಾಹ ಗೋಡೆಯಿಂದ, ಕಾಲುವೆ,  ಕಂದಕ ಮತ್ತು ಸುರಂಗ ಮಾರ್ಗಗಳಿಂದ ರಕ್ಷಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry