ಮಂಗಳವಾರ, ಮೇ 18, 2021
22 °C

ಬ್ಯಾಂಕಾಕ್‌ನಲ್ಲಿ `ವಿಶ್ವರೂಪಂ 2'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ವಿಶ್ವರೂಪಂ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಡುಗಡೆಯಾದ ನಂತರವೂ ಅದೇ ಕಾವನ್ನು ಉಳಿಸಿಕೊಂಡಿತ್ತು. `ವಿಶ್ವರೂಪಂ' ಚಿತ್ರ ಹೇಳಿಕೊಳ್ಳುವಷ್ಟು ಹಿಟ್ ಎನಿಸಿಕೊಳ್ಳದಿದ್ದರೂ ನಟ ಕಮಲ್ ಹಾಸನ್ ಈಗ `ವಿಶ್ವರೂಪಂ 2' ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ.ಕಮಲ್ ಅಭಿನಯದ `ವಿಶ್ವರೂಪಂ 2' ಈಗ ಬ್ಯಾಂಕಾಕ್‌ನ ವಾಯುನೆಲೆಯಲ್ಲಿ ಬೀಡುಬಿಟ್ಟಿದೆ. ಚಿತ್ರದಲ್ಲಿನ ಕೆಲವು ಸಾಹಸ ದೃಶ್ಯಗಳನ್ನು ಅಲ್ಲಿಯೇ ಚಿತ್ರೀಕರಿಸುವುದು ಚಿತ್ರತಂಡದ ಉದ್ದೇಶ ಎಂದು ಚಿತ್ರದ ಬಗ್ಗೆ ತುಸು ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟ ನಿರ್ಮಾಪಕ ಶೇಖರ್ ಕಪೂರ್.“ಚಿತ್ರೀಕರಣದ ಸಲುವಾಗಿ `ವಿಶ್ವರೂಪಂ 2' ಚಿತ್ರತಂಡ ಈಗ ಥಾಯ್ಲೆಂಡ್‌ನಲ್ಲಿ ಬೀಡುಬಿಟ್ಟಿದೆ. ಛಾಯಾಗ್ರಾಹಕರ ಕ್ಯಾಮೆರಾಗಳು ಈಗ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿವೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಚಿತ್ರೀಕರಣ ನಡೆಸುತ್ತಿರುವ ದೃಶ್ಯದ ಒಂದು ಛಾಯಾಚಿತ್ರವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ.ಅಂದಹಾಗೆ, ಕಮಲ್ ಅಭಿನಯಿಸಿ ನಿರ್ಮಿಸುತ್ತಿರುವ `ವಿಶ್ವರೂಪಂ 2' ಚಿತ್ರ ದ್ವಿಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರದ ಬಜೆಟ್ 95 ಕೋಟಿ ರೂಪಾಯಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.