ಬ್ಯಾಂಕಾಕ್ ಏರ್‌ವೇಸ್ ಸೇವೆ

7

ಬ್ಯಾಂಕಾಕ್ ಏರ್‌ವೇಸ್ ಸೇವೆ

Published:
Updated:

ಬೆಂಗಳೂರು: ಥಾಯ್ಲೆಂಡ್‌ಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಉನ್ನತ ವಿದ್ಯಾಭ್ಯಾಸಕ್ಕೆ ಭಾರತಕ್ಕೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಬ್ಯಾಂಕಾಕ್ ಏರ್‌ವೇಸ್, ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ನೇರ ವಿಮಾನ ಸೇವೆಗೆ ಚಾಲನೆ ನೀಡಿದೆ.ಬ್ಯಾಂಕಾಕ್ ಏರ್‌ವೇಸ್, ಈಗಾಗಲೇ ಮುಂಬೈಗೆ ವಿಮಾನ ಸೇವೆ ಕಲ್ಪಿಸಿದ್ದು,   ನೇರ ವಿಮಾನ ಸಂಪರ್ಕ ಪಡೆದ ದೇಶದ ಎರಡನೇ ನಗರ ಬೆಂಗಳೂರು ಆಗಿದೆ. ಸೆಪ್ಟೆಂಬರ್ 26ರಿಂದಲೇ ಈ ಸೇವೆ ಚಾಲನೆಗೆ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಪುಟ್ಟಿಪಾಂಗ್ ಪ್ರಸರ್‌ಟಾಂಗ್ - ಒಸಾಥ್, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಂಬೈ ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ದಕ್ಷಿಣ ಭಾರತಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರಿನಿಂದಲೂ ಇದೇ ಬಗೆಯ ಸ್ಪಂದನ ನಿರೀಕ್ಷಿಸಿದ್ದೇವೆ.  ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ವಾರಕ್ಕೆ ಐದು ದಿನ ಈ ಸೇವೆ ಲಭ್ಯ ಇರುತ್ತದೆ.

 

ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್ ಒಳಗೊಂಡಿರುವ ಏರ್‌ಬಸ್ 319-12 ವಿಮಾನದಲ್ಲಿ ಊಟದ ಸರಬರಾಜು ಇರುತ್ತದೆ. ಎಲ್ಲ ವೆಚ್ಚಗಳು ಸೇರಿದಂತೆ ವಿಮಾನದ ಟಿಕೆಟ್ ವೆಚ್ಚ ್ಙ 16 ಸಾವಿರ ಮತ್ತು ಬಿಸಿನೆಸ್ ಕ್ಲಾಸ್ ್ಙ 34 ಸಾವಿರದಷ್ಟು ಇರುತ್ತದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry