ಬ್ಯಾಂಕಿಂಗ್ ನಿರ್ವಹಣೆ ತರಬೇತಿ

7

ಬ್ಯಾಂಕಿಂಗ್ ನಿರ್ವಹಣೆ ತರಬೇತಿ

Published:
Updated:

ಯಲಹಂಕ: ಮಣಿಪಾಲ್ ಜಾಗತಿಕ ಶಿಕ್ಷಣ ಸೇವಾ ಸಂಸ್ಥೆಯು ಆ್ಯಕ್ಸಿಸ್ ಬ್ಯಾಂಕಿನ ಸಹಯೋಗದೊಂದಿಗೆ ಹೆಗಡೆ ನಗರದ ಚೊಕ್ಕನಹಳ್ಳಿಯಲ್ಲಿರುವ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಯುವ ಬ್ಯಾಂಕರುಗಳ ಕಾರ್ಯಕ್ರಮ ಆರಂಭಿಸಿದೆ.

ಕಾರ್ಯಕ್ರಮ ಉದ್ಘಾಟಿಸಿದ ಆ್ಯಕ್ಸಿಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾನವ ಸಂಪನ್ಮೂಲಗಳ ಮುಖ್ಯಸ್ಥ ರಾಜೇಶ್ ದಹಿಯಾ, ಯುವ ಬ್ಯಾಂಕರುಗಳ ಕಾರ್ಯಕ್ರಮ ಒಂದು ವರ್ಷದ ಅವಧಿಯ ವಸತಿ ಸಹಿತ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ನಿರ್ವಹಣೆ ಹಾಗೂ ಮಾರಾಟ ವಿಭಾಗಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ 120 ವಿದ್ಯಾರ್ಥಿಗಳಿಗೆ ಮಣಿಪಾಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಿಪ್ಲೊಮಾ ನೀಡುವುದರ ಜೊತೆಗೆ ಆ್ಯಕ್ಸಿಸ್ ಬ್ಯಾಂಕಿನಲ್ಲಿ 3.50 ಲಕ್ಷ ರೂಪಾಯಿ ವೇತನದ ಸಹಾಯಕ ವ್ಯವಸ್ಥಾಪಕ ದರ್ಜೆಯ ಹುದ್ದೆ ನೀಡಲಾಗುವುದು ಎಂದರು.

ತರಬೇತಿ ಕಾರ್ಯಕ್ರಮಕ್ಕೆ 3 ಲಕ್ಷ ರೂಪಾಯಿ ಶುಲ್ಕ ನೀಡಬೇಕಾಗಿದ್ದು, ತಿಂಗಳಿಗೆ ರೂ 3 ಸಾವಿರದಂತೆ 9 ತಿಂಗಳ ಕಾಲ ವಿದ್ಯಾರ್ಥಿ ವೇತನ ಹಾಗೂ ನಂತರದ ಮೂರು ತಿಂಗಳಿಗೆ ರೂ 12 ಸಾವಿರದಂತೆ ಪಾವತಿಸಲಾಗುವುದು. ಪದವಿ ಮಟ್ಟದಲ್ಲಿ ಶೇ 55ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮಣಿಪಾಲ್ ಜಾಗತಿಕ ಶಿಕ್ಷಣ ಸೇವೆಗಳ ಹಿರಿಯ ಅಧಿಕಾರಿ ಎಸ್.ವೈತೀಶ್ವರನ್ ಮಾತನಾಡಿ, ಈ ರೀತಿಯ ಕಾರ್ಯಕಾರಿ ಸಂಬಂಧಗಳು ಉದ್ಯಮ ಕ್ಷೇತ್ರಕ್ಕೆ ಅನುಕೂಲವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry